ಬೆಂಗಳೂರು: ಸಾಫ್ಟ್ ವೇರ್ ಕಂಪೆನಿ ಮಾಲೀಕನಾಗಿದ್ದರೂ ಚೈನ್ ಸ್ನ್ಯಾಚಿಂಗ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಪ್ರಭಾಕರ್ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ ಸಾಫ್ಟ್ ವೇರ್ ಉದ್ಯಮಿ. ಈತ ತಾನು ಮಾಡಿದ್ದ ಸಾಲ ತೀರಿಸಲು ಹಿಡಿದಿದ್ದು ಮಾತ್ರ ಚೈನ್ ಸ್ನ್ಯಾಚಿಂಗ್ ಕೆಲಸ. ಚೈನ್ ಸ್ನ್ಯಾಚ್ ಮಾಡುವ ಮೂಲಕ 10 ಲಕ್ಷಕ್ಕೂ ಹೆಚ್ಚು ಸಾಲ ತೀರಿಸಿದ್ದಾನೆ. ಲಕ್ಕಿ ಬೈಕ್ ವೇಸ್ಪದಿಂದ ಚೈನ್ ಸ್ನ್ಯಾಚ್‍ಗೆ ಇಳಿಯುತ್ತಿದ್ದ ಪ್ರಭಾಕರ್ ಸುಮಾರು 25ಕ್ಕೂ ಹೆಚ್ಚು ಚೈನ್ ಸ್ನ್ಯಾಚಿಂಗ್ ಮಾಡಿದ್ದಾನೆ.
Advertisement
ಹೆಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಮಡಿವಾಳ, ಜಯನಗರ ಹಾಗೂ ಇತರೆ ಭಾಗಗಳಲ್ಲಿ ಚೈನ್ ಸ್ನ್ಯಾಚ್ ಮಾಡಿದ್ದಾನೆ. ಈತ ಚೈನ್ ಸ್ನ್ಯಾಚಿಂಗ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ದಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಮಹಿಳೆಯ ಚೈನ್ ಸ್ನ್ಯಾಚ್ ಮಾಡುವ ವೇಳೆ ಕರ್ತವ್ಯದಲ್ಲಿ ಇದ್ದ ಹೆಡ್ ಕಾನ್ಸ್ ಸ್ಟೇಬಲ್ ಮಾಳಪ್ಪ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿ ಪ್ರಭಾಕರ್ ನ ಬೆನ್ನಟ್ಟಿ ಪೊಲೀಸ್ ಪೇದೆ ಹಿಡಿದಿದ್ದಾರೆ.
Advertisement
ಸದ್ಯ ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Advertisement