ನಾವಿಂದು ಹೇಳಿಕೊಡುತ್ತಿರೋ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ತುಂಬಾ ಮೃದು, ಕುಂಬಳಕಾಯಿ ಸ್ವಾದದ, ಅಗಿಯಲು ಮಜವೆನಿಸೋ ಸಖತ್ ರುಚಿಯಾದ ರೆಸಿಪಿಯಾಗಿದೆ. ಸಂಜೆ ವೇಳೆ ಒಂದು ಕಪ್ ಚಹಾದೊಂದಿಗೆ ಇಲ್ಲವೇ ಫ್ರೀ ಟೈಮ್ನಲ್ಲಿ ಈ ಕುಕೀಸ್ ನಿಮಗೆ ಜೊತೆಯಾಗಬಲ್ಲದು. ಇದಕ್ಕೆ ಓಟ್ಸ್ ಬೆರೆಸಿರುವುದರಿಂದ ಆರೋಗ್ಯಕರವೂ ಎನಿಸುತ್ತದೆ. ಮೃದುವಾದ ಸಿಹಿ ಕುಂಬಳಕಾಯಿ ಓಟ್ಸ್ ಕುಕೀಸ್ ಮಡೋದು ಹೇಗೆಂದು ನಾವಿಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – 1 ಕಪ್
ದಾಲ್ಚಿನ್ನಿ ಪುಡಿ – ಅರ್ಧ ಟೀಸ್ಪೂನ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಕರಗಿಸಿದ ಬೆಣ್ಣೆ – ಅರ್ಧ ಕಪ್
ಬ್ರೌನ್ ಶುಗರ್ – ಅರ್ಧ ಕಪ್
ಸಕ್ಕರೆ ಪುಡಿ – ಕಾಲು ಕಪ್
ಮೊಟ್ಟೆಯ ಹಳದಿ ಭಾಗ – 1
ವೆನಿಲ್ಲಾ ಸಾರ – 1 ಟೀಸ್ಪೂನ್
ಸಿಹಿ ಕುಂಬಳಕಾಯಿ ಪ್ಯೂರಿ – ಅರ್ಧ ಕಪ್
ಓಟ್ಸ್ – ಅರ್ಧ ಕಪ್ ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟು, ದಾಲ್ಚಿನ್ನಿ ಪುಡಿ, ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಒಂದು ದೊಡ್ಡ ಮಿಕ್ಸಿಂಗ್ ಬೌಲ್ನಲ್ಲಿ ಬೆಣ್ಣೆ, ಕಂದು ಸಕ್ಕರೆ, ಸಕ್ಕರೆ ಪುಡಿ ಸೇರಿಸಿ, 1-2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
* ಮೊಟ್ಟೆಯ ಹಳದಿ ಭಾಗ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಬಳಿಕ ಕುಂಬಳಕಾಯಿ ಪ್ಯೂರಿಯನ್ನು ಸೇರಿಸಿ.
* ಈಗ ಒಣ ಪದಾರ್ಥಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ನಿಧಾನವಾಗಿ ಬೆರೆಸಿ.
* ಓಟ್ಸ್ ಅನ್ನು ಮಿಶ್ರಣಕ್ಕೆ ಹಾಕಿ ಬೆರೆಸಿ.
* ಈಗ ಪಾತ್ರೆಗೆ ಪ್ಲಾಸ್ಟಿಕ್ ಕವರ್ನಿಂದ ಬಿಗಿಯಾಗಿ ಮುಚ್ಚಿ, 30 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
* ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್ಗೆ ಬಟರ್ ಪೇಪರ್ ಅನ್ನು ಹೊದಿಸಿ ಇಡಿ.
* ಈಗ ಸುಮಾರು ಒಂದೂವರೆ ಚಮಚದಷ್ಟು ಮಿಶ್ರಣ ಬರುವಂತೆ ಕುಕೀಸ್ ಆಕಾರದಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿಕೊಳ್ಳಿ. ಪ್ರತಿ ಹಿಟ್ಟಿನ ಭಾಗಗಳ ನಡುವೆ ಸ್ವಲ್ಪ ಸ್ವಲ್ಪ ಅಂತರವಿರಲಿ.
* ಈಗ ಬೇಕಿಂಗ್ ಶೀಟ್ ಅನ್ನು ಓವನ್ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಕುಕೀಸ್ಗಳನ್ನು ತೆಗೆದು 5 ನಿಮಿಷ ತಣ್ಣಗಾಗಿಸಿದರೆ ಮೃದುವಾದ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸಿನಿಮಾ ಟೈಮ್ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್ಕಾರ್ನ್ ಮಾಡಿ
Advertisement
Web Stories