ಬೆಂಗಳೂರು: ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಮನೆಯಲಿದ್ದ ಪೀಠೋಪಕರಣಗಳನ್ನು ವಾಪಸ್ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.
ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಕೋಳಿವಾಡ ಅವರ ಮನೆಯಲ್ಲಿರುವ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಇದೀಗ ಕೋಳಿವಾಡ ಅವರಿಗೆ ವಸ್ತುಗಳನ್ನು ಹಿಂದಿರಿಗಿಸುವಂತೆ ವಿಧಾನಸಭೆ ಕಾರ್ಯದರ್ಶಿ ಮೂತ್ರಿ ಪತ್ರ ಬರೆದು ಸೂಚಿಸಿದ್ದಾರೆ. ಪತ್ರದಲ್ಲಿ ಕಿಂಗ್ ಸೈಜ್ ಮಂಚ, ಇಟಾಲಿಯನ್ ಸೋಫಾ, ಮಸಾಜ್ ಚೇರ್ ಹಾಗೂ ಪೀಜನ್ ಬಾಕ್ಸ್ ಮೊದಲಾದ 7 ವಸ್ತುಗಳನ್ನು ವಾಪಸ್ ಮಾಡುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಈ ವಸ್ತುಗಳಿಗೆ ಹಣ ಕೊಡುವುದಾಗಿ ಕೋಳಿವಾಡ ಮರುಪತ್ರ ಬರೆದಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ತಾವು ಅಧಿಕಾರದಲ್ಲಿದ್ದಾಗ ಖರೀದಿಸಿದ್ದ ವಸ್ತುಗಳನ್ನು ತಮ್ಮ ನಿವಾಸಕ್ಕೆ ಹೊತ್ತೊಯ್ದಿದ್ದರು. ಖಾಸಗಿ ನಿವಾಸದಲ್ಲಿ ಲಕ್ಷ ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಸೋಫಾ ಸೆಟ್‍ಗಳಿದ್ದು, ಅದರ ಮೇಲೆ ಕೆಎಲ್‍ಎಎಸ್/ಎಲ್‍ಎಚ್/5ಕೆ ಅಂತ ನಮೂದು ಮಾಡಲಾಗಿgತ್ತು. ಈ ಕುರಿತು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ವರದಿ ಮಾಡಿತ್ತು. ಅಲ್ಲದೇ ಈ ಕುರಿತು ಸ್ವತಃ ಕೋಳಿವಾಡ ಅವರೇ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸೋಫಾ ನನ್ನ ಬಳಿಯೇ ಇರಲಿ. ಇದರ ಹಣವನ್ನು ಕೊಡುತ್ತೇನೆ ಅಂತ ಹೇಳಿದ್ದರು.
Advertisement
ಕೋಳಿವಾಡ ಅವರ ನಿವಾಸದಲ್ಲಿದ್ದ ಪೀಟೋಪಕರಣಗಳು ಯಾವುದು?
* ಸೌಲಭ್ಯ ಹೊಂದಿರುವ ಮಂಚಗಳು- 2 ಸೆಟ್
* ಸೌಲಭ್ಯ ಹೊಂದಿರುವ ಕಿಂಗ್ ಸೈಜ್ ಮಂಚ- 1 ಸೆಟ್
* ಇಟಾಲಿಯನ್ ಸೋಫಾ 3+2+1+3- 1 ಸೆಟ್
* ಮಸಾಜ್ ಸೋಫಾ- 1 ಸೆಟ್
* ಪೀಜನ್ ಬಾಕ್ಸ್- 1 ಸೆಟ್