ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ (Sodium Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ನ (Drone Prathap) ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.
ಕ್ಯಾಮೆರಾ ಮ್ಯಾನ್ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಬಂಧಿತ ಆರೋಪಿಗಳು. ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದ. ಈ ಹಿನ್ನೆಲೆ ಸ್ಥಳ ಮಹಜರು ನಡೆಸಿದ ಪೊಲೀಸರು ಶನಿವಾರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೋರ್ವ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಅತ್ಯಾಚಾರಕ್ಕೆ ಮಾವ ಯತ್ನ; ನಿರಾಕರಿಸಿದ್ದಕ್ಕೆ ಸೊಸೆಯ ಬರ್ಬರ ಹತ್ಯೆ
ಇನ್ನು ಡ್ರೋನ್ ಪ್ರತಾಪ್‌ನನ್ನು ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಮಿಡಿಗೇಶಿ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಫೋಟ ನಡೆಸಿದ್ದ ಸ್ಥಳ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ರಾಜಕೀಯ ಬಿಟ್ಟರೆ ಬೇರೇನು ಬೇಕಿಲ್ಲ: ಡಿಕೆಶಿ ವಾಗ್ದಾಳಿ