ಬೆಂಗಳೂರು: ರಾಜಕಾರಣಿಗಳಿಂದ ಸಮಾಜ ಉದ್ಧಾರ ಆಗುವುದಿಲ್ಲ. ಆದರೆ ದೇಶದ ಅಭಿವೃದ್ಧಿ ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.
ರೇವಾ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ ತಾಯಿಗಳಿಗೆ ಹಮ್ಮೆ ತರುವ ಕೆಲಸವನ್ನು ಮಾಡಿ. ಶಿಕ್ಷಣ ಎನ್ನುವುದು ನಿರಂತರವಾಗಿರಲಿ ಹಾಗೂ ದೇಶ ಅಭಿವೃದ್ಧಿಗೆ ಸಹಾಯವಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿ, ಸಚಿವನಾಗಿ ಇದೇ ಮೊದಲ ಬಾರಿ ಗೌನ್ ತೊಟ್ಟು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದು, ತುಂಬಾ ಖುಷಿಕೊಟ್ಟಿರುದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
Advertisement
Advertisement
ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಏಕೆ ಈ ರೀತಿಯ ಶಿಕ್ಷಣವಿಲ್ಲ ಎನ್ನುವ ಕುರಿತಾಗಿ ಉಪಕುಲಪತಿಗಳ ಜೊತೆ ಚರ್ಚೆ ಮಾಡಿರುವೆ. ರೇವಾ ಯುನಿವರ್ಸಿಟಿ ಮಾದರಿ ವಿಶ್ವವಿದ್ಯಾಲಯವಾಗಿದ್ದು, ಕೆಲವೇ ವರ್ಷಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿರುವುದು ತುಂಬಾ ಹೆಮ್ಮೆ ತಂದಿದೆ. ಎಲ್ಲಾ ಪದವಿದರರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
Advertisement
ಚಾನ್ಸಲರ್ ಶಾಮರಾಜು ಮಾತನಾಡಿ, 1773 ವಿದ್ಯಾರ್ಥಿಗಳು ಪದವಿ ಪಡೆದು ಹೊರಪ್ರಪಂಚಕ್ಕೆ ಹೋಗುತ್ತಿದ್ದಾರೆ. ರಾಜ್ಯಪಾಲರು ನಮ್ಮ ವಿದ್ಯಾರ್ಥಿಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದು ಖುಷಿಯಾಯ್ತು. ಸಮಾಜ ಸೇವೆಯ ದೃಷ್ಟಿಯಿಂದ ನಾವು ಈ ವಿಶ್ವವಿದ್ಯಾಲಯವನ್ನ ನಡೆಸುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ತುಂಬಾ ಶಿಸ್ತಿನಿಂದ ಕಾಲೇಜಿನಲ್ಲಿ ತೊಡಗಿಸಿಕೊಂಡು ಇಂದು ಕಾನ್ವಾಕೇಶನ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಇದು ಮೂರನೇ ಘಟಿಕೋತ್ಸವ. ಮುಂದಿನ ದಿನಗಳಲ್ಲಿ ಪೇಪರ್ ಲೇಸ್ ಮಾಡಿ, ಡಿಜಿಟಲ್ ಶಿಕ್ಷಣ ನೀಡವ ಉದ್ದೇಶವಿದೆ. ಪ್ರತಿಬಾರಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ನಡೆದಿದ್ದು, 22 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡರೆ, 7 ವಿದ್ಯಾರ್ಥಿಗಳು ಪಿಎಚ್.ಡಿ ಪಡೆದುಕೊಂಡು ಸಂಭ್ರಮಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews