– ಬಾಡಿಗಾರ್ಡ್ ಗಳ ಬಳಿಯಿದ್ದ ಗನ್‍ಗಳು ವಶಕ್ಕೆ
ಬೆಂಗಳೂರು: ಆಯುಧಪೂಜೆ ವೇಳೆ ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರು ಶನಿವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾದ್ರು. ಸುಮಾರು 8 ಗಂಟೆಗಳ ಕಾಲ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಮುತ್ತಪ್ಪ ರೈ ವಿಚಾರಣೆ ನಡೀತು.
Advertisement
ಮುತ್ತಪ್ಪ ರೈ ಹೊಂದಿದ್ದ ಶಸ್ತ್ರಾಸ್ತ್ರಗಳಿಗೆ ಸೂಕ್ತ ದಾಖಲೆಗಳು ಮತ್ತು ಲೈಸನ್ಸ್ ಅವಧಿ ಇದ್ದರಿಂದ ವಿಚಾರಣೆ ಬಳಿಕ ಅವರನ್ನ ಬಿಟ್ಟು ಕಳುಹಿಸಲಾಯ್ತು. ಆದ್ರೆ ಮುತ್ತಪ್ಪ ರೈಗೆ ಬೆಂಗಾವಲಿಗಿದ್ದ ಗನ್‍ಮನ್‍ಗಳ ಶಸ್ತ್ರಾಸ್ತ್ರಗಳ ಲೈಸನ್ಸ್ ಅವಧಿ ಮುಗಿದಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.
Advertisement
Advertisement
ಸಿಸಿಬಿ ಪೊಲೀಸರು ನೀಡಿದ ದೂರಿನ ಮೇರೆಗೆ ಕಾಟನ್‍ಪೇಟೆ ಪೊಲೀಸರು ಗನ್‍ಮನ್‍ಗಳನ್ನು ಒದಗಿಸಿದ್ದ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಎನ್‍ಸಿಆರ್ ದಾಖಲಿಸಿದ್ದಾರೆ. ಅಲ್ಲದೆ ಮುತ್ತಪ್ಪ ರೈ ಅವರ ಐವರು ಗನ್‍ಮನ್‍ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಜೊತೆಗೆ ಏಜೆನ್ಸಿ ಲೈಸೆನ್ಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎನ್‍ಸಿಆರ್ ದಾಖಲಿಸಿ ಏಳು ಮಂದಿಗೆ ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ 7 ಗನ್‍ಗಳನ್ನು ವಶಕ್ಕೆ ಪಡೆದು ಸೂಕ್ತ ದಾಖಲೆ ನೀಡಿ ಗನ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv