ಮಡಿಕೇರಿ: ಆಕೆ ಇಲಾಖೆಯೊಂದರ ಅತ್ಯುನ್ನತ ಅಧಿಕಾರಿ. ತನ್ನ ದಕ್ಷ ಕರ್ತವ್ಯದಿಂದ ಆ ಇಲಾಖೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಆ ಮಹಿಳಾ ಅಧಿಕಾರಿ ಬಿದ್ದಿದ್ದು ಮಾತ್ರ ದುಡ್ಡಿನ ಹಿಂದೆ. ಹಣ ಕೊಟ್ರೆ ಮಾತ್ರ ಕೆಲಸ ಅನ್ನೋ ಗುರಿ ಇಟ್ಕೊಂಡಿದ್ದ ಆ ಲಂಚಬಾಕ ಮೇಡಂ ಕೊನೆಗೂ ಲಾಕ್ ಆಗಿದ್ದಾಳೆ.
ಕೊಡಗು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ವಿರುದ್ಧ ಲಂಚಬಾಕತನ ಅಲ್ಲದೇ ಅನೇಕ ದೂರುಗಳಿದ್ರೂ ಎಲ್ಲೂ ಸಿಕ್ಕಿಬಿದ್ದಿರಲಿಲ್ಲ. ಆದ್ರೆ ಶನಿವಾರ 20 ಸಾವಿರ ರೂಪಾಯಿ ಲಂಚ ಪಡೆಯೋವಾಗ ಎಸಿಬಿ ಖೆಡ್ಡಾಕ್ಕೆ ಬಿದ್ದಿದ್ದಾಳೆ.
Advertisement
Advertisement
ನಳಿನಿ ಎಂಬವರ ಪತಿ 8 ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ರು. ನಳಿನಿ ಪತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ರಿಂದ ಮಾನವೀಯ ನೆಲೆಯಲ್ಲಿ ಇಲಾಖೆಯಿಂದ 4.25 ಲಕ್ಷ ಪರಿಹಾರ ಘೋಷಣೆಯಾಗಿತ್ತು. ಆದ್ರೆ ಇಲಾಖೆಯ ಅಧಿಕಾರಿಯಾದ ಮಾಯಾದೇವಿ ಗಲಗಲಿ ಈ ಹಣ ಕೊಡದೇ ಸತಾಯಿಸುತ್ತಿದ್ದಳು. ಕೊನೆಗೆ ಡೀಲ್ ಕುದುರಿಸಿ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಳು. ಅದ್ರ ಮೊದಲ ಕಂತಾಗಿ 20 ಸಾವಿರ ಪಡೆಯೋವಾಗ ಮಾಯಾದೇವಿ ಸಿಕ್ಕಿಬಿದ್ದಿದ್ದಾಳೆ. ಪ್ರಕರಣದ ಮಾಹಿತಿ ಪಡೆದ ಸಚಿವ ಸಾ.ರಾ.ಮಹೇಶ್ ಕೂಡಲೇ ಅಮಾನತಿಗೆ ಸೂಚಿಸಿದ್ದಾರೆ.
Advertisement
Advertisement
ಈ ಮಧ್ಯೆ ಲಂಚಕೋರ ಅಧಿಕಾರಿ ಮಾಯಾದೇವಿ ಅನಾರೋಗ್ಯ ಕಾರಣ ನೀಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊಸ ಡ್ರಾಮ ನಡೆಸಿದ್ದಾಳೆ. ಒಟ್ಟಿನಲ್ಲಿ ಇಂತಹ ಲಂಚಬಾಕ ಅಧಿಕಾರಿಗಳಿಗೆ ಸರ್ಕಾರ ತಕ್ಕ ಶಿಕ್ಷೆ ಕೊಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews