– ವಿರೋಧಿಗಳಿಂದ ಶುರುವಾಗಿದೆ `ಶೂ` ಟ್ರೋಲ್
ಬೆಂಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕಾಡಿದ ಶ್ರೀ ಧರ್ಮಸ್ಥಳ ಮಂಜುನಾಥ ದರ್ಶನ ವಿವಾದ ಸದ್ಯ ಪ್ರಧಾನಿ ಮಂತ್ರಿ ಮೋದಿ ಅವರಿಗೂ ತಟ್ಟಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಮೋದಿ ಅವರು ಶೂ ಧರಿಸಿ ಪ್ರವೇಶಿಸಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿ ಪ್ರಧಾನಿ ಅವರ ಭದ್ರತಾ ಸಿಬ್ಬಂದಿ, ಎಸ್‍ಪಿಜಿ ಸಿಬ್ಬಂದಿ, ಪೊಲೀಸರು ಬರಿಗಾಲಿನಲ್ಲಿ ಇದ್ದಾರೆ. ಮುಂದೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ಬರಿಗಾಲಿನಲ್ಲಿ ನಿಂತಿರುವುದನ್ನು ನಾವು ಕಾಣಬಹುದಾಗಿದೆ. ಸಾಮಾನ್ಯವಾಗಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸುವ ಮುನ್ನವೇ ಪಾದರಕ್ಷೆಗಳನ್ನು ಬಿಡುವ ಸ್ಥಳವಿದೆ. ಆದರೆ ಮೋದಿ ಅವರು ಶೂವನ್ನು ತೆಗೆಯದೇ ದೇವಾಸ್ಥಾನದ ಪ್ರಾಂಗಣವನ್ನು ಪ್ರವೇಶಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಆದ್ರೆ ಅವರು ಮೀನು ಊಟ ಸೇವಿಸಿ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
Advertisement
ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!https://t.co/aswjwGN3Ye#Mangaluru #Dharmasthala #Siddaramaiah #Modi pic.twitter.com/jOruYt77Oo
— PublicTV (@publictvnews) October 29, 2017
Advertisement