ವರ್ಷ ಕಾವೇರಿ (Varsha Kaveri) ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಮೂಡಿಸಿರುವ ಪ್ರತಿಭೆ. ರೀಲ್ಸ್ ಮೂಲಕ ಫೇಮಸ್ ಆಗಿದ್ದ ವರ್ಷ ಈಗ ಸಿನಿಮಾ ಸಂದರ್ಶನ ಮಾಡುವ ಮೂಲಕ ಸದ್ದು ಮಾಡ್ತಿದ್ದಾರೆ. ಈ ಹಿಂದೆ ‘ಬೃಂದಾವನ’ (Brundavana) ಸೀರಿಯಲ್ ನಟ ವರುಣ್ ಆರಾಧ್ಯ (Varun Aradhya) ಜೊತೆ ಬ್ರೇಕಪ್ ಮಾಡಿಕೊಂಡಿದ್ದರ ಬಗ್ಗೆ ಮತ್ತು ಬಿಗ್ ಬಾಸ್‌ಗೆ (Bigg Boss Kannada 10) ಹೋಗುವ ವಿಷ್ಯವಾಗಿ ರೀಲ್ಸ್ ರಾಣಿ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ದೊಡ್ಮನೆ ಆಫರ್ ಬಗ್ಗೆ ವರ್ಷ ಇದೀಗ ಮಾತನಾಡಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಆಫರ್ ಸಿಕ್ಕಿದ್ದು ನಿಜ. ಈ ವರ್ಷದ ಸೀಸನ್‌ಗೆ ವೈಯಕ್ತಿಕ ಕಾರಣಗಳಿಂದ ಹೋಗೋದ್ದಕ್ಕೆ ಆಗಲಿಲ್ಲ. ಮುಂದೆ ಮತ್ತೆ ಬಿಗ್ ಬಾಸ್ ಆಫರ್ ಸಿಕ್ಕರೆ ಹೋಗುವೆ ಎಂದು ವರ್ಷ ಮಾತನಾಡಿದ್ದರು. ಬಳಿಕ ನಾನು ಬಿಗ್ ಬಾಸ್ ಹೋದ್ರೆ ರೀಲ್ಸ್ ಬಿಟ್ಟು ರಿಯಲ್ ವರ್ಷನ ನೋಡುತ್ತಾರೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಸೀಸನ್ 10ಕ್ಕೆ ಆಫರ್ ಸಿಕ್ಕಿದು ನಿಜ ಆದರೆ ವೈಯಕ್ತಿಕ ಕಾರಣಗಳಿಂದ ಹೋಗಲಿಲ್ಲ. ವರುಣ್ ಆರಾಧ್ಯ ಜೊತೆಗಿನ ಬ್ರೇಕಪ್ ಸಂದರ್ಭದಲ್ಲಿ ಸಿಕ್ಕಿದು ನಿಜ ಎಂಬುದನ್ನು ಪರೋಕ್ಷವಾಗಿ ನಟಿ ಮಾತನಾಡಿದ್ದಾರೆ.
ತನಿಷಾ ಮತ್ತು ಸಂಗೀತಾ ತರ ಬೆಂಕಿ ಹಾಗೇ ವರ್ಷ ಇರುತ್ತಾರಾ ಎಂದು ಪ್ರಶ್ನೆ ವರ್ಷಗೆ ಎದುರಾಗಿದೆ. ಆಗ ಇಲ್ಲ ಹಾಗೇ ಇರಲ್ಲ. ಆದರೆ ಮಹಿಳೆಯರ ಪವರ್ ಅನ್ನು ವೀಕ್ಷಕರು ನೋಡುತ್ತಾರೆ. ಸೀರಿಯಲ್ ಮತ್ತು ಸಿನಿಮಾಗಳಿಂದ ಯಾವುದೇ ಆಫರ್ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹೊಸತನ ಪ್ರಯೋಗ ಮಾಡುವುದಕ್ಕೆ ಆಸಕ್ತಿ ಇದೆ ಎಂದು ವರ್ಷ ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಉಡಾನ್ ಖ್ಯಾತಿಯ ನಟಿ ಕವಿತಾ ಹೃದಯಾಘಾತದಿಂದ ನಿಧನ
ಎಲ್ಲರಿಗೂ ನಮಸ್ಕಾರ, ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು, ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ- ವರುಣ್ ಮಧ್ಯೆ ಮನಸ್ತಾಪಗಳು ಆಗಿತ್ತು. ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿರಲಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ತಿಳಿಸಿದ್ದ ಎಂದು ವರುಣ್ ಜೊತೆಗಿನ ಬ್ರೇಕಪ್ ಬಗ್ಗೆ ವರ್ಷ ಕಾವೇರಿ ಹೇಳಿಕೊಂಡಿದ್ದರು.
ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ನಾನು ಹೇಳದಿದ್ರೆ ನನಗೆ ನಾನೇ ಮೋಸ ಮಾಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ ಎಂದು ವರ್ಷ ತಿಳಿಸಿದ್ದರು.
ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ. ಇದು ಯಾವುದೇ ಫ್ರ‍್ಯಾಂಕ್ ಅಲ್ಲ, ಕಳೆದ 2 ತಿಂಗಳುಗಳಿಂದ ನಾನು ಇದನ್ನೂ ಎದುರಿಸುತ್ತಿದ್ದೇನೆ ಎಂದು ನಟಿ ಸ್ಪಷ್ಟನೆ ನೀಡಿದ್ದರು.