ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

Public TV
1 Min Read
monalisa bhosle 1

ಹಾಕುಂಭಮೇಳದ (Kumbh Mela 2025) ನೀಲಿ ಕಂಗಳ ಚೆಲುವೆ ಮೊನಲಿಸಾ (Monalisa Bhosle) ನಟಿಯಾಗಿ ಕ್ಯಾಮೆರಾ ಮುಂದೆ ಬರಲಿ ಎಂದು ಕಾಯುತ್ತಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಬಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

monalisaಕುಂಭಮೇಳದ ಸುಂದರಿ ಮೊನಲಿಸಾಗೆ ಬಂಪರ್ ಅವಕಾಶವೊಂದು ಸಿಕ್ಕಿದೆ. ಬಾಲಿವುಡ್ ಸಿನಿಮಾ ಅಲ್ಲ, ಬದಲಾಗಿ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಹಾಡೊಂದರಲ್ಲಿ ನಟ ಉತ್ಕರ್ಷ್ ಸಿಂಗ್ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದಾರೆ. ಇದರ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಸದ್ಯದಲ್ಲೇ ಯೂಟ್ಯೂಬ್‌ನಲ್ಲಿ ಈ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ:ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

monalisa bhosleಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾವೊಂದರಲ್ಲಿ ನಾಯಕಿ ಪಾತ್ರಕ್ಕೆ ಮೊನಲಿಸಾಗೆ ಆಫರ್ ನೀಡಿದ್ದರು. ಆ ನಂತರ ಓರ್ವ ಯುವತಿ ಮೇಲಿನ ಅತ್ಯಾಚಾರ ಆರೋಪದ ಕೇಸ್‌ನಲ್ಲಿ ನಿರ್ದೇಶಕನನ್ನು ಬಂಧಿಸಲಾಗಿತ್ತು. ಮೊನಲಿಸಾ ನಟಿಯಾಗುವ ಅವಕಾಶಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಒಂದೊಳ್ಳೆಯ ಅವಕಾಶ ಅವರನ್ನು ಅರಸಿ ಬಂದಿದೆ.

ಮಹಾಕುಂಭಮೇಳದಲ್ಲಿ ಮೊನಲಿಸಾ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾತ್ರೋ ರಾತ್ರಿ ಈ ನೀಲಿ ಕಂಗಳ ಚೆಲುವೆ ಆನ್‌ಲೈನ್‌ನಲ್ಲಿ ಸ್ಟಾರ್ ಆದರು. ಹಾಗಾಗಿ ಮೊನಲಿಸಾ ಮೇಲೆ ಪಡ್ಡೆಹುಡುಗರಿಗೆ ಸಖತ್ ಕ್ರೇಜ್ ಇದೆ.

Share This Article