ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ʻಎಕ್ಸ್ʼನಲ್ಲಿ (Social media X) ಇಂದು (ಸೋಮವಾರ) ಮಧ್ಯಾಹ್ನ ಸರ್ವರ್ ಸಮಸ್ಯೆಯಾಗಿತ್ತು. ಭಾರತ, ಅಮೆರಿಕ, ಯುಕೆ ಸೇರಿದಂತೆ ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಆ್ಯಪ್‌ಗೆ (X App) ಲಾಗ್‌ಇನ್ ಆಗಲು ಅಥವಾ ಹೊಸ ವಿಚಾರಗಳು ಲೋಡ್ ಆಗದೇ ಬಳಕೆದಾರರು ಪರದಾಡಿದರು. ಆದ್ರೆ ಬಗ್ಗೆ ಕಂಪನಿಯಾಗಲಿ, ಕಂಪನಿ ಮುಖ್ಯಸ್ಥರಾಗಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ
ಇಂದು ಮಧ್ಯಾಹ್ನ 3:15ರ ಹೊತ್ತಿಗೆ ಡೌನ್ ಡಿಟೆಕ್ಟರ್‌ನಲ್ಲಿ ಭಾರತದಲ್ಲಿ 2,000ಕ್ಕೂ ಹೆಚ್ಚು ಸೇರಿ ಜಾಗತಿಕವಾಗು 21,000ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ವರದಿಯಾಗಿದೆ. ಸ್ಥಗಿತಗೊಂಡ ಕನಿಷ್ಠ 30-40 ನಿಮಿಷಗಳ ಬಳಿಕ ಕೆಲವು ಬಳಕೆದಾರರಿಗೆ ಇದು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಪ್ಲಾಟ್‌ಫಾರ್ಮ್ ಸ್ಥಗಿತ ಟ್ರ್ಯಾಕಿಂಗ್ ವೇದಿಕೆ ಡೌನ್‌ಡೆಕ್ಟರ್ ವರದಿ ಮಾಡಿದೆ.
ಎಕ್ಸ್ ಖಾತೆ ಸರ್ವರ್ ಡೌನ್ ಸಮಸ್ಯೆ ಬಳಿಕ ಬಹುತೇಕ ಮಂದಿ ಇದನ್ನು ಮೀಮ್ಸ್ ಹಂಚಿಕೊಳ್ಳುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಲಲಿತ್ ಮೋದಿಗೆ ನೀಡಿದ್ದ ವಾನುವಾಟು ಪಾಸ್‌ಪೋರ್ಟ್ ರದ್ದು – ವಾನುವಾಟು ಪ್ರಧಾನಿ ಆದೇಶ