ನವದೆಹಲಿ: ಕೇಂದ್ರ ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಟೆಲಿಗ್ರಾಮ್‌ನ ಹಲವಾರು ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.
ಕೆಲವು ಸಾಮಾಜಿಕ ಮಾದ್ಯಮದ ಬಳಕೆದಾರರು ಮಾರ್ಫಿಂಗ್ ಮೂಲಕ ವಿಷಯಗಳನ್ನು ದೋಷಪೂರಿತವಾಗಿ ತೋರಿಸುವ ಹಾಗೂ ಸಮುದಾಯಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಾರೆ. ಹೀಗೆ ಹಲವಾರು ಮಾರ್ಫ್ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್
Advertisement
Task force on Safe&Trusted Internet at @GoI_MeitY at work????????
Handles tht tried to push fake/inciting content on twitter, youtube, fb, insta hv been blockd.
Also
a. ownrs of accnts being ID’d for actn under law.
b. to review platforms on their due diligence#SafeInternet ???????? https://t.co/52uQfIqOU6
— Rajeev Chandrasekhar ???????? (@Rajeev_GoI) January 8, 2022
Advertisement
ಇತ್ತೀಚೆಗೆ ಮಾರ್ಫ್ ಮಾಡಿದ ಕ್ಯಾಬಿನೆಟ್‌ನ ವೀಡಿಯೋವೊಂದು ಬೇರೊಂದು ಆಡಿಯೋದೊಂದಿಗೆ ತೋರಿಸಲಾಗಿತ್ತು. ಈ ಕಾರಣಕ್ಕೆ ಟ್ವಿಟ್ಟರ್‌ನ 73 ಹ್ಯಾಂಡಲ್‌ಗಳು, ನಾಲ್ಕು ಯೂಟ್ಯೂಬ್ ವೀಡಿಯೋಗಳು, ಹಾಗೂ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ತೆಗೆದು ಹಾಕಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನದ ಮಂತ್ರಿ ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ
Advertisement
ಈ ಖಾತೆಯ ನಿರ್ವಾಹಕರನ್ನು ಗುರುತಿಸಲಾಗಿದೆ. ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಹಂಚುವ ಟೆಲಿಗ್ರಾಂ ಹಾಗೂ ಫೇಸ್‌ಬುಕ್ ಖಾತೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.