– 5.98 ಕೋಟಿ ಜನರ ಸಮೀಕ್ಷೆ, 32 ಲಕ್ಷ ಹೊರಕ್ಕೆ
ಬೆಂಗಳೂರು: ಲೋಕಸಭೆ ಚುನಾವಣೆ (Lok Sabh Election) ಹೊಸ್ತಿಲಲ್ಲಿ ರಾಜ್ಯದಲ್ಲಿ ಜಾತಿಯ ಜ್ವಾಲೆ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಒಕ್ಕಲಿಗ, ವೀರಶೈವ ಲಿಂಗಾಯತರ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜಾತಿ ಜನಗಣತಿ (Caste Census) ವರದಿಯನ್ನು ಸ್ವೀಕರಿಸಿದ್ದಾರೆ.
ಬಹು ವಿವಾದಿತ, ಬಹು ಚರ್ಚಿತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ (Socio-Economic Survey) 2015ರ ದತ್ತಾಂಶಗಳ ಅಧ್ಯಯನ ವರದಿ-2024 ಅನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು (Jayaprakash Hegde) ಸಿಎಂಗೆ ಸಲ್ಲಿಸಿದ್ದಾರೆ. ವರದಿ ಪ್ರಕಾರ ರಾಜ್ಯದಲ್ಲಿ ದಲಿತರೇ ಹೆಚ್ಚು ಎನ್ನಲಾಗುತ್ತಿದೆ.
ವರದಿಯಲ್ಲಿ ಏನಿದೆ?
ಪಬ್ಲಿಕ್ ಟಿವಿಗೆ (PUBLiC TV) ಸಿಕ್ಕಿರುವ ದತ್ತಾಂಶಗಳ ಪ್ರಕಾರ ವರದಿ ಒಟ್ಟು 200 ಪುಟ, 48 ಸಂಪುಟವನ್ನು ಹೊಂದಿದೆ. ಒಟ್ಟು 5.98 ಕೋಟಿ ಜನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ 32 ಲಕ್ಷ ಮಂದಿ ಭಾಗಿಯಾಗಿಲ್ಲ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ 2,000 ಅಲ್ಲ, 4 ಸಾವಿರ ರೂ. ಕೊಡಬಹುದು: ಡಿ.ಕೆ ಸುರೇಶ್ ಹೀಗಂದಿದ್ದೇಕೆ?
ಒಟ್ಟು 5.98 ಕೋಟಿ ಜನರ ಪೈಕಿ ಅಹಿಂದ (AHINDA) ವರ್ಗದ ಸಂಖ್ಯೆಯೇ 3.96 ಕೋಟಿ ಇದೆ ಎನ್ನಲಾಗುತ್ತಿದೆ. ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣ, ಇತರರ ಸಂಖ್ಯೆ 1.87 ಕೋಟಿ ಇದ್ದು ಒಟ್ಟು 816 ಇತರೆ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ.
ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆ ಮಾಡಲಾಗಿದ್ದು, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರ್ಪಡೆ ಮಾಡಲಾಗಿದೆ.
ವರದಿ ಸ್ವೀಕಾರ ಮುಂದೇನು?
ಲೋಕಸಭೆ ಚುನಾವಣೆ ಬಳಿಕವಷ್ಟೇ ಜಾತಿಗಣತಿ ವರದಿ ಬಹಿರಂಗವಾಗುವ ಸಾಧ್ಯತೆಯಿದೆ. ಜಾತಿ ಗಣತಿ ವರದಿ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚನೆಯಾಗಲಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸಂಪುಟ ಉಪಸಮಿತಿ ರಚನೆಯಾಗಲಿದ್ದು ವರದಿ ಅಧ್ಯಯನಕ್ಕೆ ಉಪಸಮಿತಿಗೆ 3-5 ತಿಂಗಳ ಕಾಲಾವಕಾಶ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಯಾವನಾದ್ರೂ ಪಾಕ್‍ನಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಅಂದಿದ್ರೆ ಅಲ್ಲೇ ಶೂಟ್ ಮಾಡಿ ಹಾಕ್ತಿದ್ರು: ಬಿ.ವೈ ವಿಜಯೇಂದ್ರ