– ದಸರಾ ಉದ್ಘಾಟಕರಾಗಿ ಆಯ್ಕೆಯಾದ ಕುರಿತು ಮಾಧ್ಯಮಗಳೊಂದಿಗೆ ಹಂಸಲೇಖ ಸಂವಾದ
ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ ಎಂದು ಹೇಳಿತ್ತೇನೆ. ಸಾಮಾಜಿಕ ನ್ಯಾಯ ಅಥವಾ ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತ ಹೇಳುವುದಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ತಿಳಿಸಿದ್ದಾರೆ.
ಮೈಸೂರು ದಸರಾ (Mysuru Dasara) ಉದ್ಘಾಟಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ನನ್ನನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಕ್ಕೆ ಕೆಲವರು ಸಾಮಾಜಿಕ ನ್ಯಾಯ ಅಂತಾ ಹೇಳಿದ್ರು. ಅದ್ಯಾವುದನ್ನೂ ವ್ಯಾಖ್ಯಾನಿಸಲು ಕಷ್ಟ. ನಾನು ಸಿನಿಮಾ ರೈಟರ್, ನನ್ನನ್ನ ಕವಿ ಅಂದರೆ, ಕವಿ ಪಟ್ಟ ಬೇಡ ಅಂತಿನಿ. ಕವಿ ಪಟ್ಟ ತೆಗೆದುಕೊಂಡರೆ ಮೇಲು, ಮಧ್ಯ, ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ಆದ್ರೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಮಾತ್ರ ಸಾಮಾಜಿಕ ಕಲಾ ನ್ಯಾಯ ಅಂತಾ ಹೇಳ್ತೀನಿ. ಸಾಮಾಜಿಕ ನ್ಯಾಯ ಅಥವಾ ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭತ್ತದ ಬೆಳೆಯಲ್ಲಿ ಸಾಧನೆ: ಬೆಳ್ತಂಗಡಿಯ ಅಮೈ ದೇವರಾವ್‌ಗೆ ರಾಷ್ಟ್ರಪತಿಗಳಿಂದ ಪುರಸ್ಕಾರ
ಇದೇ ವೇಳೆ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ ಹಂಸಲೇಖ, ಇಂದು ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡವನ್ನ ರಕ್ಷಿಸುವ ಕೆಲಸಬೇಕು. ಹಿಂದಿ (Hindi) ಹೇರಿಕೆ ಇಂದಿನಿಂದ ಅಲ್ಲ ನಾನು 8ನೇ ತರಗತಿಯಿಂದ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದ್ರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ, ಹಿಂದಿನ ಕಾಲದಿಂದಲೂ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ
ಇತ್ತೀಚೆಗೆ ಮಕ್ಕಳನ್ನ ಇಂಗ್ಲಿಷ್‌ನಲ್ಲೇ ಓದಿಸಬೇಕು ಎಂದು ಪೋಷಕರು ಆಸೆಪಡುತ್ತಿದ್ದಾರೆ. ಕೆಲಸ ಸಿಗೋದು ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ ಆಗಬೇಕು. ಇದರಿಂದ ಕನ್ನಡವನ್ನ ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದು ಹಂಸಲೇಖ ಕರೆ ನೀಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್ ಶೇಖಾವತ್
ದುಂದುವೆಚ್ಚ ಬೇಡ:
ಬರದ ನಡುವೆಯೂ ಅದ್ಧೂರಿ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈತರ ವಿಚಾರವನ್ನ ಗಮನಿಸಬೇಕು. ಹಬ್ಬದ ಮೂಲವೇ ರೈತ, ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನ ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವ ದುಂದುವೆಚ್ಚ ಬೇಡ ಅನ್ನೋದು ನನ್ನ ಭಾವನೆ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿತಜ್ಞರ ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಹೇಳಿದ್ದಾರೆ.
Web Stories