ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಲು ಹೊರಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗ ತಾನೇ ಭರವಸೆ ನೀಡಿದ ಬೆಂಬಲ ಬೆಲೆ ಕಾನೂನು ಜಾರಿ ಮಾಡುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡದೇ ರೈತ ವಿರೋಧಿ ಧೋರಣೆ ತೋರುತ್ತಿದ್ದು, ಈ ಸರ್ಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ನಿರ್ಧರಿಸಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ ಹೀರೆಮಠ (SR Hiremath) ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತ ಪಂಚಾಯತ್ ಸಭೆಯನ್ನು ನಡೆಸಲಾಯಿತು. ದೇಶದ್ಯಾಂತ ಬಂದಿದ್ದ ರೈತ ಮುಖಂಡರು, ವಿವಿಧ ಸಂಘಟನೆಗಳ ನಾಯಕರು ಭಾಗಿಯಾಗಿದ್ದರು. ಎಲ್ಲರೂ ಸೇರಿ ಮುಂಬರುವ ಚುನಾವಣೆಯಲ್ಲಿ ರೈತ ವಿರೋಧಿ ಪ್ರಧಾನಿ ಮೋದಿ ಸರ್ಕಾರವನ್ನು ಸೋಲಿಸಲು ನಿರ್ಧರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಕೊಡಿಸಿದ್ದು ಪತ್ನಿ ಕುಟುಂಬ ಅಲ್ಲ: ಯದುವೀರ್ ಸ್ಪಷ್ಟನೆ
Advertisement
Advertisement
2019 ರಲ್ಲಿ ಬಹುಮತ ಪಡೆದ ಮೋದಿ (Narendra Modi) ಸರ್ಕಾರ ಬೇಕಾದ್ದು, ಮಾಡಬಹುದು ಎನ್ನುವ ರೀತಿಯಲ್ಲಿ ವರ್ತಿಸಿತು. ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿ ಮಾಡಿತು. ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಇದರ ಭಾಗವಾಗಿ ಶುಕ್ರವಾರ ರೈತ ಪಂಚಾಯತ್ ನಡೆಸಲಾಯಿತು. ರಾಜ್ಯದಿಂದ ಸಂಯುಕ್ತ ಹೋರಾಟ ಕರ್ನಾಟಕದಿಂದ ಭಾಗಿಯಾಗಿತ್ತು ಎಂದರು.
Advertisement
ರೈತರ (Farmers) ಬೇಡಿಕೆ ಬಗ್ಗೆ ನಿನ್ನೆ ಧ್ವನಿ ಎತ್ತುವ ಕೆಲಸ ಮಾಡಿದೆ. ಸ್ವಾಮಿನಾಥನ್ ವರದಿ ಜಾರಿಗೆ ನಾವು ಆಗ್ರಹಿಸಿದ್ದೇವೆ, ನಿನ್ನೆ ನಡೆಸಿದ ಪ್ರತಿಭಟನೆ ಒಂದು ಪ್ರಭಾವಶಾಲಿ ಪ್ರತಿಭಟನೆಯಾಗಿದೆ ರೈತರ ಈ ಹೋರಾಟ ಮೋದಿ ಸರ್ಕಾರದ ಸೋಲಿಗೆ ನಾಂದಿಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಇದೇ ವೇಳೆ ಚುನಾವಣಾ ಬಾಂಡ್ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಒಂದು ರಾಜಕೀಯ ಭ್ರಷ್ಟಚಾರ, ಸುಪ್ರೀಂಕೋರ್ಟ್ ಇದರ ವಿರುದ್ಧ ಆದೇಶ ನೀಡಿದೆ. ಲೋಕಸಭಾ ಚುನಾವಣೆ ಒಳಗೆ ಜನರಿಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಮಾಡಿದೆ. ಇದೇ ರೀತಿಯ ಧೈರ್ಯ ಚುನಾವಣಾ ಆಯೋಗದ ಸ್ವಾಯತ್ತತೆಯ ನೀಡುವಲ್ಲಿಯೂ ಕೋರ್ಟ್ ಮಾಡಬೇಕು. ಈ ನಿಟ್ಟಿನಲ್ಲಿ ಅರ್ಜಿಯನ್ನು ದಾಖಲಿಸಿದೆ ಮಾರ್ಚ್ 2 ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ರಾಜಕೀಯ ಪ್ರಭಾವದಿಂದ ಚುನಾವಣಾ ಆಯೋಗ ಹೊರಬರಬೇಕಿದೆ ಕೇಂದ್ರ ಸರ್ಕಾರ ತಂದಿರುವ ಕಾನೂನು ರದ್ದು ಮಾಡಬೇಕಿದೆ ಎಂದು ಹೇಳಿದರು.