ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಚುನಾವಣೆಗೆ ನಿಲ್ಲುವ ಮೊದಲೇ ಕಂಟಕ ಎದುರಾಗಿದೆ.
ಈ ಬಾರಿ ಚುನಾವಣೆಗೆ ನಿಲ್ಲಲ್ಲು ಯೋಜನೆ ರೂಪಿಸಿದ್ದ ಜನಾರ್ದನ ರೆಡ್ಡಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮೈನಿಂಗ್ ಕೇಸ್‍ನಲ್ಲಿ ಸುಪ್ರೀಂಕೋರ್ಟ್‍ಗೆ ತೆರಳಿ ಇಬ್ಬರು ಮಾಜಿ ಸಿಎಂಗಳ ವಿರುದ್ಧ ಕೇಸ್ ಗೆದ್ದಿರೋ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಂ ಅದೇ ಮಾದರಿಯಲ್ಲಿ ರೆಡ್ಡಿಯ ಅಕ್ರಮ ಮೈನಿಂಗ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲು ತೀರ್ಮಾನ ಮಾಡಿದ್ದಾರೆ.
Advertisement
ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ಹಾಕಿದ್ದ ಕೇಸನ್ನು ಹೈಕೋರ್ಟ್ ಮಾರ್ಚ್ 13ರಂದು ವಜಾ ಮಾಡಿತ್ತು. ಆದರೆ, ಇಡಿ ಮೇಲ್ಮನವಿ ಸಲ್ಲಿಸಿಲ್ಲ. ಇದೀಗ ಇದೇ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನೆ ಮಾಡಲು ಅಬ್ರಹಂ ತೀರ್ಮಾನಿಸಿದ್ದಾರೆ.
Advertisement
Advertisement
ಕೇಸ್‍ಗೆ ಮರುಜೀವ: ಹೈಕೋರ್ಟ್ ಮಾರ್ಚ್ 13ರಂದು ಇಡಿ ದಾಖಲಿಸಿದ್ದ ಕೇಸ್ ವಜಾ ಮಾಡಿತ್ತು. ಸರ್ಕಾರಕ್ಕೆ 884 ಕೋಟಿ ರೂ. ವಾಪಸ್ ನೀಡಲು ಕೋರ್ಟ್ ಹೇಳಿತ್ತು. ಹಳೆಯ ಕೇಸ್‍ಗೆ ಹೊಸ ಕಾನೂನು ಅನ್ವಯ ಆಗೋದಿಲ್ಲ ಎಂದು ಹೈಕೋರ್ಟ್ ಈ ಕೇಸನ್ನು ವಜಾ ಮಾಡಿತ್ತು. ಇದೇ ಪ್ರಕರಣವನ್ನ ಕೈಗೆತ್ತಿಕೊಂಡು ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ಟಿ.ಜೆ.ಅಬ್ರಾಹಂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
Advertisement
ಇದನ್ನೂ ಓದಿ: ಗಣಿನಾಡಿಗೆ ಜನಾರ್ದನ ರೆಡ್ಡಿ ಗುಡ್‍ಬೈ?