ಬೆಂಗಳೂರು: ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ದುರ್ಬಳಕೆ ಮಾಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಅವರಿಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ.
ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡುವ ಸಂಬಂಧ ಅಬ್ರಾಹಂ ಪಿಐಎಲ್ ಸಲ್ಲಿಸಿದ್ದರು. ಖಾಸಗಿಯವರು ಜಾಗ ನೀಡಿದ್ದರೂ ಸರ್ಕಾರಿ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಬ್ರಾಹಂ ಪಿಐಎಲ್‍ನಲ್ಲಿ ದೂರಿದ್ದರು.
Advertisement
ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಪಿಐಎಲ್ ದುರ್ಬಳಕೆ ಮಾಡಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ದಂಡವನ್ನು ಎರಡು ವಾರದಲ್ಲಿ ಕಟ್ಟುವಂತೆ ಸೂಚಿಸಿದೆ. ಪ್ರಕರಣ ಸಂಬಂಧಪಟ್ಟಂತೆ ರಾಜ್ಯದ ಪರ ಅಡ್ವೋಕೇಟ್ ಜನರಲ್ ಮಧುಸೂದನ್ ವಾದ ಮಂಡಿಸಿದ್ದರು.
Advertisement
ಏನಿದು ಪ್ರಕರಣ?: ಅಳಂದ ಪಟ್ಟಣದ ಸಮೀಪ ನಗರದ ವ್ಯಕ್ತಿಯೊಬ್ಬರು ಸರ್ವೆ ನಂ. 264 ರ ಜಾಗದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಮಾಡಲು ದಾನವಾಗಿ ನೀಡಿದ್ದರು. ಆದರೆ ನಗರದಿಂದ 8 ಕಿ.ಮೀ. ದೂರದಲ್ಲಿರುವ 8 ಕಿ.ಮೀ ದೂರದಲ್ಲಿ ಸೇರಿದ ಸರ್ವೆ ನಂ 696 ರಲ್ಲಿ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
Advertisement