ಮೈಸೂರು: ಪ್ರಗತಿಪರ ಹೋರಾಟಗಾರರು ಹಾಗೂ ಸಮಾಜವಾದಿ ಚಿಂತಕರಾಗಿದ್ದ ಮೈಸೂರಿನ ಪ.ಮಲ್ಲೇಶ್ (85) (P.A Mallesh) ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
Advertisement
ಮೈಸೂರಿನ ತಮ್ಮ ನಿವಾಸದಲ್ಲಿ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆ ಬಳಿಕ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಫ್ಲೈಟ್‌ನಲ್ಲಿ ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ: ಅಣ್ಣಾಮಲೈ ಸಮರ್ಥನೆ
Advertisement
ಚಿತ್ರದುರ್ಗ ಜಿಲ್ಲೆ ಗುಡ್ಡದರಂಗವ್ವನ ಹಳ್ಳಿಯವರಾದ ಅವರು ಶಾಂತವೇರಿ ಗೋಪಾಲಗೌಡರ ಪ್ರಭಾವದಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1970ರ ದಶಕದಲ್ಲಿ ಮೈಸೂರು ಮಹಾರಾಜರು ಚಿನ್ನದ ಅಂಬಾರಿ ಮೇಲೆ ಕುಳಿತುಕೊಳ್ಳುವುದನ್ನು ವಿರೋಧಿಸಿ ಟಿ.ವಿ ಶ್ರೀನಿವಾಸರಾಯ, ವೇದಾಂತ ಹೆಮ್ಮಿಗೆ, ಶ್ರೀಕಂಠಯ್ಯ, ಟಿ.ಎನ್ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪ್ತರಾಗಿದ್ದ ಪ.ಮಲ್ಲೇಶ್ ಪ್ರಗತಿಪರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಬ್ರಾಹ್ಮಣರ ಮತ್ತು ಬ್ರಾಹ್ಮಣ್ಯದ ಬಗ್ಗೆ ಮಾತನಾಡಿ, ವಿವಾದಕ್ಕೆ ಸಿಲುಕಿಕೊಂಡಿದ್ದರು. ಅಲ್ಲದೆ, ಮೈಸೂರು ದಸರಾ ಸಮಯದಲ್ಲಿ ದ್ರಾವಿಡ ರಾಜ ಮಹಿಷನ ಚಾರಿತ್ರ್ಯವಧೆಯ ವಿರುದ್ಧ ನಡೆಯುತ್ತಿದ್ದ ಮಹಿಷ ದಸರಾ ಸಂಘಟಿಸುವವರಲ್ಲಿ ಪ.ಮಲ್ಲೇಶ್ ಕೂಡ ಒಬ್ಬರಾಗಿದ್ದರು. ಇದನ್ನೂ ಓದಿ: ಇದು ಕುಸ್ತಿಪಟುಗಳ ಹೋರಾಟ.. ರಾಜಕೀಯ ಮಾಡ್ಬೇಡಿ: ಪ್ರತಿಭಟನೆಗೆ ಬಂದ ಸಿಪಿಐ ನಾಯಕಿಗೆ ತಡೆ
Advertisement
Advertisement
ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಪ್ರಗತಿಪರ ಸಂಘಟನೆಗಳ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಬರಹಗಾರ ಒಕ್ಕೂಟದ ಸಂಸ್ಥಾಪಕ ಕಾರ್ಯದರ್ಶಿ, ಕರ್ನಾಟಕ ವಿಚಾರವಾದಿ ಒಕ್ಕೂಟ ಸ್ಥಾಪಕ ಅಧ್ಯಕ್ಷ, ಮೇಲುಕೋಟೆಯಲ್ಲಿರುವ ಜನಪದ ಸೇವಾ ಟ್ರಸ್ಟ್‌ಗೆ ಎರಡು ಬಾರಿ ಅಧ್ಯಕ್ಷ, ಒಂದು ಬಾರಿ ಕಾರ್ಯದರ್ಶಿಯಾಗಿದ್ದರು. ಇದೀಗ ಪ.ಮಲ್ಲೇಶ್ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಪತ್ನಿ ಸರ್ವಮಂಗಳ ಮೃತಪಟ್ಟಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k