ತಿರುವನಂತಪುರಂ: ಇತ್ತೀಚೆಗೆ ದಿನ ಬಳಕೆ ವಸ್ತುಗಳ ಬೆಲೆ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ, ನಿಂಬೆ ಹಣ್ಣು ಬೆಲೆ ಏರಿಕೆಯಾಗಿದ್ದು, ಬೇಸಿಗೆ ವೇಳೆ ಗ್ರಾಹಕರ ಮೇಲೆ ಬೆಲೆ ಏರಿಕೆ ಸಂಕಷ್ಟಕ್ಕೆ ಸಿಲುಕಿದೆ.
Advertisement
ಬೇಸಗೆಯಲ್ಲಿ ತಂಬು ಪಾನೀಯ, ಅದರಲ್ಲೂ ನಿಂಬೆ ಹಣ್ಣಿನ ಪಾನಕ ಮಾಡಿಕೊಂಡು ಕುಡಿಯುವುದು ಹೆಚ್ಚು. ಇದೇ ಸಮಯದಲ್ಲಿ ಕೇರಳ ಜನರು ನಿಂಬೆ ಹಣ್ಣಿನ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಕಳೆದ ವಾರ ಒಂದು ಕೆ.ಜಿ ನಿಂಬೆ ಬೆಲೆ 100 ರೂ. ಇತ್ತು. ಈ ವಾರ 180 ರೂ.ಗಳಿಗೆ ಏರಿಕೆಯಾಗಿದೆ. ಕೊಟ್ಟಾಯಂ ಮತ್ತಿತರ ನಗರಗಳಲ್ಲಿ ನಿಂಬೆ ಬೆಲೆ ಕೆ.ಜಿ.ಗೆ 210 ರೂ. ತಲುಪಿದೆ. ಇದನ್ನೂ ಓದಿ: ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ
Advertisement
Advertisement
ದಾಖಲೆ ಬೆಲೆಯಲ್ಲಿ ನಿಂಬೆ ಹಣ್ಣು ಮಾರಾಟವಾಗುತ್ತಿರುವುದು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಈ ಬೆಲೆಯೇರಿಕೆಯಿಂದಾಗಿ ಜ್ಯೂಸ್ ಪಾರ್ಲರ್‌ಗಳಿಗೆ ನಷ್ಟ ಉಂಟಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನೀರಿನ ಕೊರತೆಯಿಂದಾಗಿ ನಿಂಬೆಹಣ್ಣಿನ ಕೊರತೆ ಉಂಟಾಗಿರುವುದೇ ಬೆಲೆಯೇರಿಕೆಗೆ ಕಾರಣ ಎಂದು ಸಂಘ ಅಭಿಪ್ರಾಯಪಟ್ಟಿದೆ.