ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ ವಿಧಿಸಲಾಗಿದೆ.
ಅಂತರಗಂಗೆಯ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂ ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ಮಲೆಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಅಂತರಗಂಗೆಯಲ್ಲಿ ನಿತ್ಯ ನೂರಾರು ಭಕ್ತರು ಸ್ನಾನ ಮಾಡುತ್ತಾರೆ. ಸೋಪು, ಶಾಂಪೂ ಬಳಕೆಯಿಂದ ಮಲಿನಗೊಳ್ಳುತ್ತಿದೆ. ಅಂತರಗಂಗೆಯ ಶುಚಿತ್ವ, ಪಾವಿತ್ರ್ಯತೆ ಕಾಪಾಡಲು ಪ್ರಾಧಿಕಾರ ಮುಂದಾಗಿದೆ.
ಈ ಸಂಬಂಧ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.