ಮುಂಬೈ: ಬಿಜೆಪಿಯು (BJP) ಚುನಾವಣೆಗೆ ಭಗವಾನ್ ರಾಮನೇ (Lord Rama) ನಮ್ಮ ಅಭ್ಯರ್ಥಿ ಎಂದು ಘೋಷಿಸುವುದು ಮಾತ್ರ ಉಳಿದಿದೆ ಎಂದು ಹೇಳುವ ಮೂಲಕ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ (Sanjay Raut) ಟೀಕಿಸಿದ್ದಾರೆ.
ಅಯೋಧ್ಯೆಯ ರಾಮಜನ್ಮಭೂಮಿ (Ayodhya Ram Mandir) ದೇಗುಲದ ಉದ್ಘಾಟನಾ ಸಮಾರಂಭದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸದ್ಯ ಬಿಜೆಪಿಯವರು ರಾಮನೇ ನಮ್ಮ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದು ಒಂದೇ ಬಾಕಿಯಿರುವುದು ಎಂದು ಅವರು ವಾಗ್ದಾಳಿಗಳನ್ನು ನಡೆಸಿದ್ದಾರೆ.
Advertisement
Advertisement
ಇದೇ ವೇಳೆ ಕಾಂಗ್ರೆಸ್ (Congress) ಝೀರೋದಿಂದ ಆರಂಭವಾಗಬೇಕು ಎಂಬ ತಮ್ಮ ಮೇಲಿನ ಆರೋಪದ ಕುರಿತು ಮಾತನಾಡಿ, ಕಾಂಗ್ರೆಸ್ ಶೂನ್ಯ ಎಂದು ನಾನು ಹೇಳಿಲ್ಲ. ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಒಬ್ಬನೇ ಒಬ್ಬ ಸಂಸದ ಇಲ್ಲ. ನಮ್ಮಲ್ಲಿ 18 ಸಂಸದರಿದ್ದು, ಅದರಲ್ಲಿ ಕೆಲವರು ಹೋಗಿದ್ದಾರೆ. ಈಗ ನಮ್ಮಲ್ಲಿ 6 ಸಂಸದರಿದ್ದಾರೆ ಎಂದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್ ಅಬ್ದುಲ್ಲಾ
Advertisement
ನಮ್ಮ ಮೈತ್ರಿ ಕಾಂಗ್ರೆಸ್‌ನೊಂದಿಗೆ ಇದೆ ಮತ್ತು ಮಹಾ ವಿಕಾಸ್ ಅಘಾಡಿ ಸುಮಾರು 40 ಸ್ಥಾನಗಳನ್ನು ಗೆಲ್ಲುತ್ತಾರೆ. ಇನ್ನು ಬಿಜೆಪಿಗೆ ಗೆಲ್ಲಲು ಇವಿಎಂ (EVM) ಬೇಕು, ಅವರಿಗೆ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಇವಿಎಂ ಜೊತೆ ಅವರ ಮೈತ್ರಿ ಇದೆ ಎಂದು ಸಂಜಯ್ ರಾವತ್ ಟಾಂಗ್ ಕೊಟ್ಟರು.