ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದ ಸೂಪರ್ ಓವರಿನಲ್ಲಿ ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಈಗ ಅವರು ನ್ಯೂಜಿಲೆಂಡ್ ಯುವ ಕ್ರಿಕೆಟ್ ತಂಡದ ಕ್ರೀಡಾ ಸ್ಫೂರ್ತಿಯನ್ನು ಹಾಡಿ ಹೊಗಳಿದ್ದಾರೆ.
ರೋಹಿತ್ ಶರ್ಮಾ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿ, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಎರಡನೇ ಕ್ವಾರ್ಟರ್ ಫೈನಲ್‍ನಲ್ಲಿ ತೋರಿಸಿದ ಹೃದಯಸ್ಪರ್ಶಿ ಸನ್ನಿವೇಶವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಗುವಿನಂತೆ ಹಾರಿ ರೋಹಿತ್‍ರನ್ನು ಬಿಗಿದಪ್ಪಿ ಅಭಿನಂದಿಸಿದ ಕೊಹ್ಲಿ – ವಿಡಿಯೋ ವೈರಲ್
Advertisement
Advertisement
ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 239 ರನ್ ಪೇರಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಇನ್ನಿಂಗ್ಸ್ 43ನೇ ಓವರಿನ ಕೊನೆಯಲ್ಲಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ವಿಂಡೀಸ್‍ನ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ನಿವೃತ್ತರಾದರು. ಆದರೆ ಇನ್ನಿಂಗ್ಸ್ ನ 48ನೇ ಓವರಿನಲ್ಲಿ ವಿಂಡೀಸ್ ಒಂಬತ್ತು ವಿಕೆಟ್ ಕಳೆದುಕೊಂಡಿದ್ದರಿಂದ ಕಿರ್ಕ್ ಮೆಕೆಂಜಿ ಮತ್ತೆ ಬ್ಯಾಟಿಂಗ್‍ಗೆ ಬಂದರು. ಬಳಿಕ ಕ್ರಿಸ್ಟಿಯನ್ ಕ್ಲಾರ್ಕ್ ಅವರ ಮುಂದಿನ ಎಸೆತದಲ್ಲಿ ಕಿರ್ಕ್ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಕೊನೆಯಲ್ಲಿ ಶಮಿ ಬೌಲಿಂಗ್, ರೋಹಿತ್ ಸಿಕ್ಸರ್ ಮ್ಯಾಜಿಕ್ – ಸೂಪರ್ ಓವರ್‌ನಲ್ಲಿ ಭಾರತಕ್ಕೆ ಜಯ
Advertisement
ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಗುತ್ತಿದ್ದಂತೆ ಮೆಕೆಂಜಿ ಮೈದಾನದಿಂದ ಹೊರನಡೆಯಲು ಹೆಣಗಾಡಿದರು. ಈ ವೇಳೆ ಇಬ್ಬರು ನ್ಯೂಜಿಲೆಂಡ್ ಆಟಗಾರರು ಮೆಕೆಂಜಿಯವರ ರಕ್ಷಣೆಗೆ ಬಂದು ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು.
Advertisement
So good to see this #SpiritOfCricket at its best. https://t.co/qzUZjEuRt5
— Rohit Sharma (@ImRo45) January 30, 2020
ಈ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ಇದು ಅತ್ಯಂತ ಉತ್ತಮ ಕ್ರೀಡಾ ಸ್ಫೂರ್ತಿ. ಇದನ್ನು ನೋಡಲು ಅತ್ಯುತ್ತಮವಾಗಿದೆ ಎಂದು ನ್ಯೂಜಿಲೆಂಡ್ ತಂಡವನ್ನು ಹೊಗಳಿದ್ದಾರೆ. ಪಂದ್ಯದಲ್ಲಿ ಪರ ಕಿರ್ಕ್ ಮೆಕೆಂಜಿ 104 ಎಸೆತಗಳಲ್ಲಿ 99 ರನ್ ಗಳಿಸಿದ್ದರು.