ಬೆಂಗಳೂರು: ಹಿಮಪಾತ ಹಾಗೂ ಭಾರೀ ಮಳೆ ಹಿನ್ನೆಲೆಯಲ್ಲಿ ಲಡಾಕ್‌ನಲ್ಲಿ (Ladakh) ಬೆಂಗಳೂರಿಗರು (Bengaluru People) ಸಿಲುಕಿಕೊಂಡಿದ್ದಾರೆ. ಲಡಾಕ್‌ನ ರಾಷ್ಟ್ರೀಯ ಹೆದ್ದಾರಿಗಳು ಭೂ ಕುಸಿತವಾಗಿದ್ದು, ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಲಡಾಕ್‌ನಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ವಿಮಾನ ಸಿಗದೆ ಕಳೆದ ಎರಡು ದಿನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವೈದ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು
ಭಾರೀ ಮಳೆ, ದಟ್ಟ ಮಂಜು, ವಿಪರೀತ ಚಳಿಯಲ್ಲಿ ನಡುಗುತ್ತಲೇ ಬೆಂಗಳೂರಿಗರು ವೀಡಿಯೋ ಹಂಚಿಕೊಂಡಿದ್ದಾರೆ. ಹೇಗಾದ್ರೂ ಮಾಡಿ ಬೆಂಗಳೂರಿಗೆ ಕರೆಸಿಕೊಳ್ಳಿ. ತುಂಬಾ ಕಷ್ಟ ಆಗ್ತಿದೆ. ದಯವಿಟ್ಟು ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿಮಾನಗಳ ಹಾರಾಟ ಸ್ಥಗಿತಗೊಂಡ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಜನರ ದಂಡೇ ನೆರೆದಿದೆ. ನಿರಂತರ ಮಳೆಗೆ ಆರೋಗ್ಯ ಕೈಕೊಡ್ತಿದೆ. ಇಲ್ಲಿ ಇನ್ನೂ ಸುಮಾರು ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನ ಬೆಂಗಳೂರು ಮೂಲದ ವೈದ್ಯರು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ
Web Stories