ಬಿಗ್ ಬಾಸ್ ಮನೆಯ (Bigg Boss Kannada 10) ಲವ್ ಬರ್ಡ್ಸ್ ನಮ್ರತಾ-ಸ್ನೇಹಿತ್ ಜೋಡಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಮ್ರತಾ (Namratha Gowda) ಮೇಲೆ ಫೀಲಿಂಗ್ಸ್ ಇದೆ. ನಮ್ರತಾ ಜೊತೆ ಫ್ರೆಂಡ್‌ಶಿಪ್‌ಗಿಂತ ತುಸು ಜಾಸ್ತಿ ಅಟ್ಯಾಚ್ ಆಗಿದ್ದೀನಿ ಎಂದು ಸ್ನೇಹಿತ್ (Snehith Gowda) ಇದೀಗ ವಿನಯ್ ಬಳಿ ಅಳಲು ತೋಡಿಕೊಂಡಿದ್ದಾರೆ.
ಬಿಗ್ ಮನೆಯಲ್ಲಿ 55 ದಿನಗಳಿಂದ ಆಗ್ತಿರೋದು ಒಂದೇ ವಿಚಾರ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಸ್ನೇಹಿತ್ ಲವ್ವಿ-ಡವ್ವಿ ಆಟದಲ್ಲಿ ನಾನಿಲ್ಲ ಎಂದು ನಮ್ರತಾ ಹೇಳುತ್ತಲೇ ಬಂದಿದ್ದಾರೆ. ಆದರೆ ಸ್ನೇಹಿತ್‌ಗೆ ಅರ್ಥವಾಗುವ ಲಕ್ಷಣ ಕಾಣ್ತಿಲ್ಲ. ಬಿಗ್ ಬಾಸ್ ಮನೆಗೆ ಸ್ನೇಹಿತ್ ಕಾಲಿಟ್ಟಾಗ ಮೊದಲು ಇದ್ದ ಹುಮ್ಮಸ್ಸು ಇದೀಗ ಇಲ್ಲ. ನಮ್ರತಾ ಹಿಂದೆ ಓಡಾಡೋದು ಬಿಟ್ಟು ಸ್ನೇಹಿತ್ ಆಟ ಸೊನ್ನೆಯಾಗಿ ನಿಂತಿದ್ದಾರೆ. ಕಳೆದ ವಾರ ಬಾಟಮ್ 2ರಲ್ಲಿ ಸ್ನೇಹಿತ್ ಸೇವ್ ಆಗಿದ್ದರು. ಸದ್ಯ ವಾರದ ಕ್ಯಾಪ್ಟನ್ ಆಗಿ ಸ್ನೇಹಿತ್ ಆಯ್ಕೆಯಾಗಿ ಆಟ ಆಡುತ್ತಿದ್ದಾರೆ. ಇದೆಲ್ಲದರ ನಡುವೆ ನಮ್ರತಾ ಮೇಲಿನ ಭಾವನೆಯನ್ನ ಸ್ನೇಹಿತ್ ಅವರು ವಿನಯ್ ಗೌಡ (Vinay Gowda) ಬಳಿ ಹಂಚಿಕೊಂಡಿದ್ದಾರೆ. ನಮ್ರತಾ ಮೇಲೆ ಸ್ಪೆಷಲ್ ಫೀಲಿಂಗ್ ಇದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:Bigg Boss: ಚಮಚಾಗಿರಿ ಬಿಟ್ಟ ನಮ್ರತಾಗೆ ಸಿಕ್ತು ಕಿಚ್ಚನ ಚಪ್ಪಾಳೆ
ನನ್ನ ಲೈಫ್‌ನಲ್ಲಿ ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜೊತೆ ನಾನು ಫ್ರೆಂಡ್‌ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು ಎಂದು ಸ್ನೇಹಿತ್ ಹೇಳಿದ್ದಾರೆ.
ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜೊತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ ಎಂದು ಸ್ನೇಹಿತ್ ಹೇಳಿದ್ದಾರೆ. ನಮ್ರತಾ ಗೌಡ ಅವರ ಫೋಟೋ ಪಕ್ಕದಲ್ಲಿ ತಮ್ಮ ಫೋಟೋವನ್ನು ಇರಿಸಿ ಸ್ನೇಹಿತ್ ಗೌಡ ಖುಷಿಪಟ್ಟಿದ್ದಾರೆ. ಇದಕ್ಕೆಲ್ಲ ನಮ್ರತಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.