ಮದುವೆ ಪ್ರಪೋಸಲ್‌ಗೆ ನಮ್ರತಾ ಗ್ರೀನ್‌ ಸಿಗ್ನಲ್‌- ನಾಚಿ ನೀರಾದ ಸ್ನೇಹಿತ್

Public TV
2 Min Read
namratha gowda

ದೊಡ್ಮನೆ ಪ್ರೇಮ ಪಕ್ಷಿಗಳಾದ ನಮ್ರತಾ (Namratha Gowda) ಮತ್ತು ಸ್ನೇಹಿತ್ (Snehith Gowda) ಮತ್ತೆ ಒಂದಾಗಿದ್ದಾರೆ. ಕ್ಯಾಪ್ಟೆನ್ಸಿ ವಿಚಾರದಲ್ಲಿ ಮುನಿಸಿಕೊಂಡಿದ್ದ ನಮ್ರತಾ, ಇದೀಗ ಮತ್ತೆ ಸ್ನೇಹಿತ್ ಜೊತೆಗಿನ ಫ್ರೆಂಡ್‌ಶಿಪ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಾನು ನಿಮ್ಮ ಪ್ರೀತಿನ ಒಪ್ಪಿಕೊಂಡ್ರೆ ಏನು ಮಾಡ್ತೀರಾ ಎಂದು ಸ್ನೇಹಿತ್‌ಗೆ ಕೇಳಿದ್ದಾರೆ. ನಮ್ರತಾ ಮಾತಿಗೆ ಸ್ನೇಹಿತ್ ನಾಚಿ ನೀರಾಗಿದ್ದಾರೆ. ನಮ್ರತಾ- ಸ್ನೇಹಿತ್‌ ಲವ್ವಿ-ಡವ್ವಿಯಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹಿಂದೆ ಬಿದ್ದಿದ್ದ ಸ್ನೇಹಿತ್‌ಗೆ ನಮ್ರತಾ ಮನಸೋತ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

namratha gowdaಕ್ಯಾಪ್ಟನ್ಸಿ ಟಾಸ್ಕ್‌ನಿಂದ ನಮ್ರತಾ ಅವರನ್ನು ಹೊರಗೆ ಇಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಇಟ್ಟಿದ್ದಕ್ಕೆ ಬೇಸರ ಇಲ್ಲ. ಆದರೆ, ಅವರು ಸರಿಯಾದ ಕಾರಣ ನೀಡಿಲ್ಲ. ತಾವು ಕೆಟ್ಟವರಲ್ಲ, ಪಕ್ಷಪಾತ ಮಾಡುತ್ತಿಲ್ಲ ಎಂಬುದನ್ನು ತೋರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ನಮ್ರತಾ ನೇರವಾಗಿ ಮಾತನಾಡಿದ್ದಾರೆ. ಸ್ನೇಹಿತ್ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದರು. ಇದನ್ನೂ ಓದಿ:ರಿಯಾಲಿಟಿ ಶೋಗೆ ಗ್ಲ್ಯಾಮರಸ್‌ ಆಗಿ ಎಂಟ್ರಿ ಕೊಟ್ಟ ಸಮಂತಾ

namratha gowda 1 1ಕಳೆದ 60 ದಿನಗಳಿಂದ ನಡೆಯುತ್ತಿರೋ ಸೀನ್ ಅಂದರೆ ನಮ್ರತಾ ಹಿಂದೆ ಹೋಗೋದನ್ನ ಸ್ನೇಹಿತ್ ಬಿಟ್ಟಿಲ್ಲ. ನಮ್ರತಾಗೆ ಆಗಾಗ ಪ್ರೇಮ ನಿವೇದನೆ ಮಾಡುತ್ತಲೇ ಬಂದಿದ್ದಾರೆ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಇದೀಗ ಇದೆನ್ನೆಲ್ಲಾ ಗಮನಿಸಿ ನಮ್ರತಾ, ಸರಿ ನಾನು ನಿಮ್ಮ ಪ್ರೀತಿಯನ್ನ ಒಪ್ಪಿಕೊಂಡರೆ ಮುಂದೇನು? ಫ್ಯೂಚರ್ ಪ್ಲ್ಯಾನ್ ಏನು ಎಂದು ಕೇಳಿದ್ದಾರೆ.

namratha gowda 1ಹೇಳಿ ಈಗ ನಾನು ಪ್ರೀತಿ ಮಾಡ್ತೀನಿ ಅಂದ್ರೆ ಏನು ಮಾಡ್ತೀರಿ ಎಂದು ನೇರವಾಗಿ ಪ್ರಶ್ನೆ ಎಸೆದರು. ಆದರೆ, ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂಬುದೇ ಸ್ನೇಹಿತ್‌ಗೆ ತಿಳಿಯಲಿಲ್ಲ. ಅವರು ನಕ್ಕು ಸುಮ್ಮನಾದರು. ಹೇಳಿ ಈಗ ನಾನು ಪ್ರೀತಿಸುತ್ತೇನೆ ಎಂದರೆ ಏನು ಮಾಡ್ತೀರಾ. ಇಷ್ಟು ದಿನ ಸುಮ್ಮನೆ ಕಾಳು ಹಾಕಿದ್ರಾ ಎಂದು ಮರು ಪ್ರಶ್ನೆ ಹಾಕಿದರು.

ಬಿಗ್ ಬಾಸ್‌ನಿಂದ (Bigg Boss Kannada 10) ಹೊರಗೆ ಹೋದ ಬಳಿಕ ಮನೆಯವರ ಜೊತೆ ಮಾತನಾಡೋಣ. ಒಂದು ವರ್ಷ ಮದುವೆ ಆಗೋದು ಬೇಡ. ನಿಮ್ಮಿಷ್ಟದ ಜಾಗಕ್ಕೆ ಹೊಗೋಣ. ಸ್ವಿಜರ್‌ಲೆಂಡ್‌ಗೆ ಮೊದಲು ಹೋಗೋಣ ಎಂದರು ಸ್ನೇಹಿತ್. ಅವರ ಮಾತನ್ನು ಕೇಳಿ ನಮ್ರತಾ ನಕ್ಕರು. ನಮ್ರತಾ ನಗುತ್ತಲೇ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರಾ? ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಆದರೆ ನಮ್ರತಾ ನಗುವಿಗೆ ಸ್ನೇಹಿತ್ ಮಾತ್ರ ನಾಚಿ ನೀರಾಗಿದ್ದಾರೆ. ಅಂತೂ ಇಂತೂ ಕೋಪ ಮಾತನಾಡುತ್ತಿದ್ದಲ್ಲಾ ಅಂತ ಸಮಾಧಾನದಲ್ಲಿದ್ದಾರೆ ಸ್ನೇಹಿತ್.

Share This Article