ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೀತಿ ಆಗೋದು ಕಾಮನ್, ಬ್ರೇಕಪ್ ಆಗೋದು ಕಾಮನ್. ಈ ಬಾರಿ ಬಿಗ್ ಬಾಸ್ ಸೀಸನ್‌ನಲ್ಲಿ ನಮ್ರತಾ ಮತ್ತು ಸ್ನೇಹಿತ್ ಜೋಡಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ದೊಡ್ಮನೆಯಿಂದ ಹೊರಬಂದಿರೋ ನಮ್ರತಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ ನಮ್ರತಾ (Namratha Gowda) ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೊಡ್ಮನೆಯಲ್ಲಿ 105 ದಿನಗಳನ್ನು ನಮ್ರತಾ ಕಳೆದಿದ್ದಾರೆ. ಇನ್ನೇನು ಫಿನಾಲೆಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಮುಗ್ಗರಿಸಿದ್ದಾರೆ. ಈಗ ಬಿಗ್ ಬಾಸ್ ಮನೆಯಿಂದ ಹೊರಬಂದಿರೋ ನಮ್ರತಾಗೆ ಸ್ನೇಹಿತ್ ಕುರಿತು ಪ್ರಶ್ನೆಗಳು ಎದುರಾಗುತ್ತಿವೆ. ಸ್ನೇಹಿತ್ (Snehith Gowda) ಹಲವು ಬಾರಿ ನಮ್ರತಾಗೆ ಪ್ರೇಮ ನಿವೇದನೆ ಮಾಡಿದ್ದರು. ನನಗೆ ಬಿಗ್ ಬಾಸ್ ಮನೆಯಲ್ಲಿ ಲವ್ ಆಗುತ್ತೆ ಎಂದು ಅನಿಸೋದಿಲ್ಲ ಎಂದು ನಮ್ರತಾ ಮಾತನಾಡಿದ್ದರು.
ಸ್ನೇಹಿತ್ ಜೊತೆಗಿನ ಸ್ನೇಹದ ವಿಚಾರಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತ್ ಕುರಿತ ವಿಚಾರ ಏನೇ ಬರಲಿ ನೋ ಕಾಮೆಂಟ್ಸ್ ಎಂದಷ್ಟೇ ಉತ್ತರ ನೀಡುತ್ತಿದ್ದಾರೆ. ಹಲವು ಸಂದರ್ಶನಗಳಲ್ಲಿ ಸ್ನೇಹಿತ್ ಕುರಿತು ಎಲ್ಲಿಯೂ ಮಾತನಾಡುವ ಆಸಕ್ತಿ ನಮ್ರತಾ ತೋರಿಸಿಲ್ಲ.
ಇನ್ನೂ ಸ್ನೇಹಿತ್ ಜೊತೆ ನಮ್ರತಾಗೆ ಉತ್ತಮ ಒಡನಾಟ ಇತ್ತು. ಅವರ ಎಲಿಮಿನೇಷನ್ ನಂತರ ಕಾರ್ತಿಕ್ (Karthik Mahesh) ಜೊತೆಗಿನ ನಮ್ರತಾ ಫ್ರೆಂಡ್‌ಶಿಪ್ ಹೈಲೆಟ್ ಆಗಿ ಕಾಣಿಸಿತ್ತು. ಕೆಲ ದಿನಗಳ ಹಿಂದೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಯೊಳಗೆ ಬಿಟ್ಟಿದ್ದರು. ಆಗ ಕಾರ್ತಿಕ್ ಮತ್ತು ನಿಮ್ಮ ಫ್ರೆಂಡ್‌ಶಿಪ್ ಬೇರೆ ತರಹ ಕಾಣಿಸುತ್ತಿದೆ. ಹೊರಗಡೆ ನೆಗೆಟಿವ್ ಟ್ರೋಲ್ ಆಗುತ್ತಿದೆ ಎಂದು ಸ್ನೇಹಿತ್ ಮಾತನಾಡಿದ್ದರು. ಇದು ನಮ್ರತಾ ಬೇಸರ ತರಿಸಿತ್ತು. ಇದನ್ನೂ ಓದಿ:ಗಣರಾಜ್ಯೋತ್ಸವಕ್ಕೆ ಒಟಿಟಿಯಲ್ಲಿ ರಶ್ಮಿಕಾ ನಟನೆಯ ಅನಿಮಲ್
ಬಿಗ್ ಬಾಸ್‌ನಿಂದ ಹೊರಗಡೆ ಹೋದ್ಮೇಲೆ ನಿಮ್ಮ ಜೊತೆ ಮಾತನಾಡಲ್ಲ. ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡಲ್ಲ ಎಂದು ನಮ್ರತಾ ಖಡಕ್ ಆಗಿ ಸ್ನೇಹಿತ್‌ಗೆ ತಿಳಿಸಿದ್ದರು. ಹಾಗಾಗಿಯೇ ಈಗ ಸ್ನೇಹಿತ್ ಕುರಿತು ಏನೇ ಪ್ರಶ್ನೆ ಎದುರಾದರೂ ನೋ ಕಾಮೆಂಟ್ಸ್ ಎಂದು ಉತ್ತರ ನೀಡುತ್ತಿದ್ದಾರೆ. ಅಲ್ಲಿಗೆ ಸ್ನೇಹಿತ್ ಜೊತೆಗಿನ ಸ್ನೇಹಕ್ಕೆ ನಮ್ರತಾ ಬ್ರೇಕ್ ಹಾಕಿದ್ದಾರೆ.