ಬಳ್ಳಾರಿ: ಹಾವುಗಳು ಹುತ್ತದಲ್ಲಿ ಇಲ್ಲವೇ ತಗ್ಗು ಗುಂಡಿಗಳಲ್ಲಿ ಇರೋದು ಮಾಮೂಲು. ಆದ್ರೆ ಎರಡು ಹಾವುಗಳು ವಿದ್ಯುತ್ ಬಲ್ಬ್ ನಲ್ಲಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯ 5ನೇ ವಾರ್ಡ್‍ನ ಬೀದಿ ದೀಪದ ಬಲ್ಬ್ ನೊಳಗೆ ಹಾವುಗಳು ಆಶ್ರಯ ಪಡೆದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ವಿದ್ಯುತ್ ಕಂಬದಲ್ಲಿನ ಚಿಕ್ಕದಾದ ಬೀದಿ ದೀಪದ ಲೈಟಿನಲ್ಲಿ ಎರಡು ಹಾವುಗಳು ಪ್ರತ್ಯಕ್ಷವಾಗಿರುವುದನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಚಿಕ್ಕದಾದ ಜಾಗದಲ್ಲಿ ಎರಡು ಹಾವುಗಳಿದ್ದರೂ ಸ್ವಲ್ಪವೂ ಜಗಳವಾಡದೇ ಇರುವುದು ನಿಜಕ್ಕೂ ವಿಶೇಷವಾಗಿದೆ. ಮೇಲಿನ ಮರದಿಂದ ಕೆಳಗಿನ ವಿದ್ಯುತ್ ಕಂಬದ ಬಲ್ಬ್ ನೊಳಗೆ ಹಾವುಗಳು ಹೋಗಿರಬಹುದು ಎಂದು ಹೇಳಲಾಗಿದೆ.