ಬಾಗಲಕೋಟೆ: ಜಿಲ್ಲಾಧಿಕಾರಿಗಳ ಕಚೇರಿ (District Headquarters) ಎದುರೇ ಹಾವು (Snake) ಕಾಣಿಸಿಕೊಂಡು ಕೆಲಹೊತ್ತು ಅಲ್ಲಿಯ ನೌಕರರನ್ನ ಭಯಭೀತಗೊಳಿಸಿದ್ದ ಘಟನೆ ಬಾಗಲಕೋಟೆ (Bagalkote) ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.
ಎಂದಿನಂತೆ ನೌಕರರು ತಮ್ಮ ಕೆಲಸಕ್ಕೆ ಹಾಜರಾಗುವ ವೇಳೆ ಹಾವು ಕಚೇರಿ ಎದುರು ಹರಿದು ಮುಂದೆ ಹೊರಟಿತ್ತು.ನಂತರ ಜಿಲ್ಲಾಡಳಿತ ಸಿಬ್ಬಂದಿ ಸ್ನೇಕ್ ಕ್ಯಾಚರ್ ರಾಜುಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ರಾಜು ಹಾವನ್ನು ರಕ್ಷಣೆ ಮಾಡಿದರು. ಇದನ್ನೂ ಓದಿ: ಪೊಲೀಸ್ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ
Advertisement
Advertisement
ಇದು ಮಂಡಲದ ಹಾವಾಗಿದ್ದು ವಿಷಕಾರಿ ಅಲ್ಲ. ಈ ಹಾವು ಕಚ್ಚಿದರೆ ಜನರು ಸಾಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಹಾವಿನ ಜಾತಿಯ ಬಗ್ಗೆ ರಾಜು ಅರಿವು ಮೂಡಿಸಿದರು.
Advertisement
ಸುಮಾರು ಎರಡು ಅಡಿಯ ಉದ್ದದ ಹಾವು ಇದಾಗಿದ್ದು, ಇದು ಮನೆಯ ಗೋಡೆ ಹಾಗೂ ಸಂದಿಗೊಂದಿಗಳಲ್ಲಿ ಸಂಚರಿಸುತ್ತದೆ. ಅಡಗಿರುವ ಇಲಿಯನ್ನು ಬೇಟೆಯಾಡುತ್ತದೆ. ಆಹಾರ ಅರಸುತ್ತಾ ಡಿಸಿ ಕಚೇರಿಗೆ ಬಂದಿರಬಹುದು ಎಂದು ರಾಜು ಹೇಳಿದರು.
Advertisement