ಮಂಗಳೂರು: ತಂತಿ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಸವಣಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯ ತೋಟದ ಆವರಣಕ್ಕೆ ಹಾಕಿದ್ದ ಕಬ್ಬಿಣದ ಬೇಲಿಯಲ್ಲಿ ಕಾಳಿಂಗ ಸಿಕ್ಕಿಕೊಂಡಿತ್ತು. ವಿಷಯ ತಿಳಿದ ಸ್ಥಳೀಯರು ಉಜಿರೆಯ ಹಾವು ಹಿಡಿಯುವ ಸ್ನೇಕ್ ಜೋಯ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ.
Advertisement
ಬುಸುಗುಟ್ಟುತ್ತಿದ್ದ 13 ಅಡಿ ಉದ್ದದ ಹಾವನ್ನು ಬೇಲಿಯ ಎಡೆಯಿಂದ ಪಾರು ಮಾಡಿದ್ದಲ್ಲದೆ, ಹಾವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ವಿಷ ಉಗುಳುವ ಕಾಳಿಂಗನ ರಕ್ಷಣೆಯನ್ನು ನೋಡಲು ಸ್ಥಳೀಯರು ಭಯ, ಆತಂಕದಲ್ಲಿಯೇ ಸ್ಥಳದಲ್ಲಿ ನೆರೆದಿದ್ದರು.
Advertisement
https://www.youtube.com/watch?v=0cfTnAMRJAM