Connect with us

ಬಾಗಿಲು ತೆಗೆಯಲು ಹೋದಾಗ ಕಚ್ಚಲು ಬಂತು ಹಾವು! – ವೈರಲ್ ವಿಡಿಯೋ ನೋಡಿ

ಬಾಗಿಲು ತೆಗೆಯಲು ಹೋದಾಗ ಕಚ್ಚಲು ಬಂತು ಹಾವು! – ವೈರಲ್ ವಿಡಿಯೋ ನೋಡಿ

ಬ್ಯಾಂಕಾಕ್: ಇದ್ದಕ್ಕಿದ್ದಂತೆ ಹಲ್ಲಿಯೊಂದು ಮೈಮೇಲೆ ಬಿದ್ರೇನೇ ಕುಣಿದಾಡಿಬಿಡ್ತೀವಿ. ಇನ್ನು ಹಾವೊಂದು ಕಚ್ಚಲು ಬಂದ್ರೆ ಹೇಗಾಗಬೇಡ? ಥೈಲ್ಯಾಂಡಿನ ಯುವಕನೊಬ್ಬನಿಗೆ ಆಗಿದ್ದೂ ಇದೇ. ಆದ್ರೆ ಆತ ಹಾವು ಕಚ್ಚಲು ಬಂದಾಗ ಆತಂಕದಿಂದ ಕುಣಿದಾಡಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ

ಇಂಟರ್ನೆಟ್ ಕೆಫೆಯೊಳಗಿದ್ದ ಯುವಕ ಆರಾಮಾಗಿ ಅಲ್ಲಿದ್ದವರ ಜೊತೆ ಮಾತನಾಡುತ್ತಲೇ ಬಾಗಿಲು ತೆಗೆಯಲು ಮುಂದಾದ. ಈ ವೇಳೆ ಹಾವೊಂದು ಬಾಗಿಲಿನ ಚಿಲಕದ ಬಳಿಯಿಂದ ಆತನನ್ನು ಕಚ್ಚಲು ಮುಂದಾಗಿದೆ. ಹಾವು ಅಂತ ಗೊತ್ತಾಗಿದ್ದೇ ತಡ ಆತ ಹೌಹಾರಿ ಅದರಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾನೆ. ಕೊನೆಗೆ ಆ ಹಾವು ಚೇರ್‍ಗಳ ಕೆಳಗೆ ಹೋಗಿದ್ದು, ಈತ ಅಲ್ಲಿಂದ ಎದ್ದು ಹೊರಗೆ ಓಡಿದ್ದಾನೆ.

ಇನ್ನು ಅಲ್ಲಿದ್ದವರೂ ಕೂಡ ಚೇರ್ ಮೇಲೆ ಎಗರಿ ಕುಳಿತು ಕೆಲವು ಸೆಕೆಂಡ್‍ಗಳ ಕಾಲ ಮೂಕವಿಸ್ಮಿತರಾಗಿ ನೋಡಿದ್ದಾರೆ. ಹಾವು ಎಲ್ಲಿ ಹೋಯ್ತು ಅಂತ ಗೊತ್ತಾಗದೆ ಕೊನೆಗೆ ಅವರೂ ಕೂಡ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ. ಇದನ್ನು ನೋಡಿ ಇಂಟರ್ನೆಟ್ ಬಳಕೆದಾರರು ಬಿದ್ದೂ ಬಿದ್ದೂ ನಕ್ಕಿದ್ದಾರೆ.

ಈ ಘಟನೆ ಏಪ್ರಿಲ್ 8 ರಂದು ಥೈಲ್ಯಾಂಡಿನ ವೈಸೆಟ್ ಚೈ ಚಾನ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

https://www.youtube.com/watch?v=yY5wPFcXrTQ

Advertisement
Advertisement