ತಿರುವನಂತಪುರಂ: ರೈಲೊಂದರಲ್ಲಿ ಹಾವು ಕಾಣಿಸಿಕೊಂಡಿದ್ದು, ಅದನ್ನು ಹುಡುಕಲು ಒಂದು ಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡಿದ ಘಟನೆ ಕೇರಳದ ಕೋಝಿಕ್ಕೋಡ್‍ನಲ್ಲಿ ನಡೆದಿದೆ.
ತಿರುವನಂತಪುರಂ- ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ 5ನೇ ಬೋಗಿಯಲ್ಲಿ ಲಗೇಜ್‍ನ ಪಕ್ಕದಲ್ಲಿ ಹಾವು ಇರುವ ಬಗ್ಗೆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಹೀಗೆ ಹಾವಿನ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಅಷ್ಟೇ ಅಲ್ಲದೇ ಕೋಝಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಲುಪಿದ ತಕ್ಷಣ ಅವರು ಹಾವನ್ನು ಪತ್ತೆ ಹಚ್ಚಲು ಉರಗ ತಜ್ಞರ ವ್ಯವಸ್ಥೆಯನ್ನು ಅರಣ್ಯ ಇಲಾಖೆಯವರು ಮಾಡಿದ್ದಾರೆ.
Advertisement
ರೈಲಿನಲ್ಲಿ ಹಾವನ್ನು ಕಂಡ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ನಿಲ್ದಾಣದಲ್ಲಿ ಕಂಪಾರ್ಟ್‍ಮೆಂಟ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗಿಳಿದರು. ಇಬ್ಬರು ಹಾವು ಹಿಡಿಯುವವರು ರೈಲಿನಲ್ಲಿ ಸಂಪೂರ್ಣ ಹುಡುಕಾಟ ನಡೆಸಿದ್ದಾರೆ. ಆದರೂ ಹಾವನ್ನು ಹಿಡಿಯಲು ಸಾಧ್ಯವಾಗಲಿಲ್ಲ.
Advertisement
ಪ್ರಯಾಣಿಕರೊಬ್ಬರು ತೆಗೆದ ಫೋಟೋದಲ್ಲಿ ಹಾವು ಕಂಡು ಬಂದಿದೆ. ಕಂಪಾರ್ಟ್‍ಮೆಂಟ್‍ನ ಪಕ್ಕದಲ್ಲಿರುವ ರಂಧ್ರದಲ್ಲಿ ತಪ್ಪಿಸಿಕೊಂಡು ಅಥವಾ ಅಡಗಿಕೊಂಡಿರಬಹುದು ಎಂದು ರೈಲ್ವೇ ಮೂಲಗಳು ಹೇಳಿದೆ.