ಬ್ಯಾಂಕಾಕ್: ಹೆಬ್ಬಾವೊಂದು ಟಾಯ್ಲೆಟ್ ಸೀಟ್‍ನಿಂದ ಹೊರಬಂದು ಮಹಿಳೆಯ ಹಿಂಭಾಗ ಕಚ್ಚಿದ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.
ಬ್ಯಾಂಕಾಕ್‍ನ ತಾಲಿಂಗ್ ಚನ್ ಪ್ರದೇಶದ ನಿವಾಸಿಯಾಗಿರೋ 42 ವರ್ಷದ ಮಮ್ ಫನಾರತ್ ಚೈಬೂನ್‍ಗೆ ಹಾವು ಕಚ್ಚಿದೆ. ಗಾಬರಿಯಿಂದ ಮಹಿಳೆ ತಿರುಗಿ ನೋಡಿದ್ರೆ ಟಾಯ್ಲೆಟ್ ಕಮೋಡ್‍ನಲ್ಲಿ ಹಾವಿನ ತಲೆ ಕಾಣಿಸಿದೆ. ತಕ್ಷಣ ಆಕೆ ಕಮೋಡ್‍ನ ಲಿಡ್ ಮುಚ್ಚಿ ತಾನೇ ಡ್ರೈವ್ ಮಾಡಿಕೊಂಡು ಹೋಗಿ ಇಲ್ಲಿನ ಪಯಾಥೈ 3 ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಆದ್ರೆ ಯಾವ ಜಾತಿಯ ಹಾವು ಕಚ್ಚಿದೆ ಎಂದು ವೈದ್ಯರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲವಾದ್ದರಿಂದ ವಿಷ ನಿರೋಧಕ ಚಿಕಿತ್ಸೆ ನೀಡಲು ಹಿಂಜರಿದಿದ್ದರು. ನಂತರ ಮಹಿಳೆಯ ಮನೆಯಿದ್ದ ಹೌಸಿಂಗ್ ಕಾಂಪ್ಲೆಕ್ಸ್ ನ ಸೆಕ್ಯೂರಿಟಿಗೆ ಕರೆ ಮಾಡಿದ್ದು, ಅದು ಹೆಬ್ಬಾವು ಅನ್ನೋದು ಖಚಿತವಾಗಿತ್ತು.
Advertisement
ಹೆಬ್ಬಾವುಗಳು ವಿಷಕಾರಿಯಲ್ಲ ಆದ್ರೂ ಅವು ಕಚ್ಚಿದ್ರೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗುವ ಸಂಭವವಿದ್ದಿದ್ದರಿಂದ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ಮಹಿಳೆಯ ಆಸ್ಪತ್ರೆಯ ಬಿಲ್ ಸುಮಾರು 34 ಸಾವಿರ ರೂ.(18 ಸಾವಿರ ಟಿಹೆಚ್‍ಬಿ) ಆಗಿದ್ದು, ಅದರ ಸ್ಪಲ್ಪ ಭಾಗ ಮಾತ್ರ ಇನ್ಶುರೆನ್ಸ್‍ನಡಿ ಕವರ್ ಆಗಿದೆ ಎಂದು ವರದಿಯಾಗಿದೆ.
Advertisement
ಮಹಿಳೆ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಕೆಲವು ದಿನಗಳ ಬಳಿಕ ಅವರ 15 ವರ್ಷದ ಮಗಳು ಕೆಳಮಹಡಿಯ ಟಾಯ್ಲೆಟ್‍ನಲ್ಲಿ ಇನ್ನೂ ಉದ್ದದ ಹಾವನ್ನ ನೋಡಿದ್ದಾಳೆ. ಭಯಗೊಂಡ ಆಕೆ ತನ್ನ ಸಂಬಂಧಿಕರ ಮನೆಗೆ ಹೋಗಿ ನೆಲೆಸಿದ್ದಾಳೆ.
ಮನೆಯ ಕೆಳಗೆ ಯಾವುದೋ ರಂಧ್ರವಿರಬೇಕು. ಅದರ ಮೂಲಕವೇ ಹಾವುಗಳು ಒಳಗೆ ಬರುತ್ತಿರಬಹುದು ಎಂದು ಮಹಿಳೆ ಹೇಳಿದ್ದಾರೆ. ಈ ಹಿಂದೆ ಮನೆಯ ತೋಟದಲ್ಲಿ ದೈತ್ಯ ಹಲ್ಲಿ ಕಾಣಿಸಿಕೊಂಡಿತ್ತು ಎಂದಿದ್ದಾರೆ.
ಮಹಿಳೆಗೆ ಕಚ್ಚಿದ ಹೆಬ್ಬಾವನ್ನ ಸೆರೆಹಿಡಿಯಲಾಯ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.