ಶಿವಮೊಗ್ಗ: ಕೊಡ, ತಂಬಿಗೆಯಲ್ಲಿ ನಾಯಿ-ಬೆಕ್ಕು ಇನ್ನಿತರ ಪ್ರಾಣಿಗಳ ತಲೆ ಸಿಕ್ಕಿ ಹಾಕಿಕೊಂಡು ಒದ್ದಾಡುವುದು ಸಾಮಾನ್ಯ. ಆದರೆ ಶಿವಮೊಗ್ಗದಲ್ಲಿ ಬಿಯರ್ ಕ್ಯಾನ್ ನಲ್ಲಿ ನಾಗರ ಹಾವಿನ ತಲೆ ಸಿಲುಕಿಸಿಕೊಂಡು ಪರದಾಡಿದ ಘಟನೆ ನಡೆದಿದೆ.
ಕಿಂಗ್ ಫಿಶರ್ ಬಿಯರ್ ಕ್ಯಾನ್ ನಲ್ಲಿ ಸಿಲುಕಿದ್ದ ಆಗಿದ್ದ ನಾಗನಿಗೆ ಶಿವಮೊಗ್ಗದ ಉರಗ ತಜ್ಞ ಸ್ನೇಕ್ ಕಿರಣ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಮುಕ್ತಿ ಕೊಟ್ಟಿದ್ದಾರೆ. ನೆಹರೂ ಕ್ರೀಡಾಂಗಣದ ಹೊರ ಆವರಣದಲ್ಲಿ ಇರುವ ಮೋರಿಯಲ್ಲಿ ಯಾರೋ ಬಿಯರ್ ಕುಡಿದು ಕ್ಯಾನ್ ಹಾಕಿ ಹೋಗಿದ್ದಾರೆ. ಈ ಕ್ಯಾನ್ ಒಳಗೆ ಇದ್ದ ಹುಳು-ಹುಪ್ಪಟೆಗಳು ನಾಗರಹಾವನ್ನು ಸೆಳೆದಿವೆ. ಸೀದಾ ಕ್ಯಾನ್ ನ ಪುಟ್ಟ ಕಿಂಡಿಯೊಳಗೆ ತಲೆ ತೂರಿಸಿದ ನಾಗಪ್ಪ ಹೊರ ಬರಲಾರದ ತಿಣುಕಾಡತೊಡಗಿದ್ದನು.
ಕ್ಯಾನ್ ಸಮೇತ ಚರಂಡಿಯೊಳಗೆ ತಿರುಗಾಡುತ್ತಿದ್ದ ಹಾವು ಕೆಲ ಕಾಲ ಬಂದವರಿಗೆ ಮನರಂಜನೆಯನ್ನೂ ಒದಗಿಸಿದೆ. ಕೊನೆಗೆ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಹಾವಿನ ತಲೆ ಸಿಕ್ಕಿಕೊಂಡಿದ್ದ ಕ್ಯಾನನ್ನು ಛಾಯಾಗ್ರಾಹಕ ಶಿವಮೊಗ್ಗ ನಂದನ್ ಸಹಕಾರದಿಂದ ಕತ್ತರಿಸಿದ್ದಾರೆ.
ಇದನ್ನೂ ಓದಿ: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು
ಕೊನೆಗೆ ರಕ್ಷಿಸಿದ ಹಾವನ್ನು ಚೀಲದಲ್ಲಿ ಹಾಕಿಕೊಂಡು ದೂರದ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿ: ವಿಡಿಯೋ: ಕೂಲ್ ಡ್ರಿಂಕ್ಸ್ ಬಾಟಲಿ ನುಂಗಿತು ನಾಗರ ಹಾವು!
ಇದನ್ನೂ ಓದಿ: ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗಿತ್ತು: ಅಪರೂಪದ ವಿಡಿಯೋ ನೋಡಿ
https://youtu.be/mN9c9Y8Wtyk