ನವದೆಹಲಿ: ದೇಶದಲ್ಲಿ ಇತ್ತೀಚಿನ ಕೆಲ ಘಟನೆಗಳು ಸಾರ್ವಜನಿಕರನ್ನ ದಿಗ್ಭ್ರಮೆಗೊಳಿಸುತ್ತಿವೆ. ಹೀಗೂ ಉಂಟೇ ಎನ್ನುವಷ್ಟು ಅಚ್ಚರಿಯನ್ನೂ ಮೂಡಿಸುತ್ತಿದೆ. ಅಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ವೀಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಹೌದು… ಮಹಿಳೆಯೊಬ್ಬರು ಮಲಗಿದ್ದ ವೇಳೆ ಅತ್ಯಂತ ವಿಷಕಾರಿ ಹಾವಿನ ಮರಿಯೊಂದು (Snake) ಆಕೆಯ ಕಿವಿಯಿಂದ (Ear) ಒಳಹೊಕ್ಕಿದೆ. ಬಳಿಕ ಹೊರಬಾರದೇ ಕಿವಿಯಲ್ಲೇ ಸಿಕ್ಕಿಕೊಂಡಿದೆ. ಈ ಕುರಿತ ವೀಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, 87 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ವೀಡಿಯೋ ನಲ್ಲಿ ಹಳದಿ ಬಣ್ಣದ ಹಾವೊಂದು ಮಹಿಳೆಯ (Women) ಕಿವಿಯೊಳಗೆ ಗಟ್ಟಿಯಾಗಿ ಸಿಕ್ಕಿಕೊಂಡಿದೆ. ಆದರೆ ಹೊರಬರುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ವೈದ್ಯರು (Doctors) ಸತತವಾಗಿ ಮಹಿಳೆ ಕಿವಿಯಿಂದ ಹಾವನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಘಟನೆ ನಡೆದ ಸ್ಥಳ ಸಮಯವನ್ನು ಬಹಿರಂಗಪಡಿಸಿಲ್ಲ. ಕೊನೆಗೆ ಮಹಿಳೆಯ (Women) ಕಿವಿಯಿಂದ ಹಾವು ಹೊರ ಬಂದಿತೇ ಇಲ್ಲವೇ ಎನ್ನುವ ಕುತೂಹಲದೊಂದಿಗೆಯೇ ವೀಡಿಯೋ ಕೊನೆಗೊಂಡಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ
ಕೆಲವರು ವೀಡಿಯೋ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ, ಇನ್ನೂ ಕೆಲವರು ಇದು 100 ಪರ್ಸೆಂಟ್ ಸುಳ್ಳು, ಕೇವಲ ವೀವ್ಸ್ಗಾಗಿ ವೀಡಿಯೋ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ
ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯ ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ 81 ಸಾವಿರದಿಂದ 1.38 ಲಕ್ಷ ಮಂದಿಯಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದರ ಮೂರು ಪಟ್ಟು ಅಧಿಕ ಮಂದಿ ಶಾಶ್ವತ ಅಂಕವೈಕಲ್ಯ ಉಂಟುಮಾಡುತ್ತಿದೆ ಎಂದು ಹೇಳಿದೆ.