ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಧಮ್‍ಪುರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಟರ್ ಕೂಲರ್ ನಿಂದ ಬಾಟಲ್ ಗೆ ನೀರು ತುಂಬಿಕೊಳ್ಳುವಾಗ ನೀರಿನೊಂದಿಗೆ ಹಾವಿನ ಮರಿಯೊಂದು ಬಂದಿದೆ.
ಉಧಮ್‍ಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ತಂದೆಯೊಬ್ಬರು ಮಗನಿಗಾಗಿ ವಾಟರ್ ಕೂಲರ್ ನಿಂದ ನೀರು ತುಂಬಿಕೊಳ್ಳುವಾಗ ಕೂಲರ್ ನಿಂದ ಹಾವಿನ ಮರಿಯೊಂದು ಹೊರ ಬಂದಿದೆ.
ನಾನು ನನ್ನ ಮಗನಿಗೆ ಕುಡಿಯಲು ನೀರು ತುಂಬಿಕೊಂಡು ಬಂದೆ. ನನ್ನ ಮಗ ನೀರು ಕುಡಿಯುವಾಗ ಬಾಟಲ್ ನಲ್ಲಿ ಹಾವಿನ ಮರಿಯೊಂದು ನೋಡಿದೆ. ಕೂಡಲೇ ಅವನಿಂದ ಬಾಟಲ್ ಕಸಿದುಕೊಂಡೆ ಎಂದು ರೋಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದು ಆಸ್ಪತ್ರೆಯ ಸಿಬ್ಬಂದಿಗೆ ಬೇಜವಬ್ದಾರಿಯನ್ನು ತೋರಿಸುತ್ತದೆ. ಜನರು ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದರೆ ಇಂತಹ ನೀರನ್ನು ಕುಡಿದರೆ ಮತ್ತಷ್ಟು ಆರೋಗ್ಯ ಕೆಡುತ್ತದೆ ಎಂದು ರೋಗಿಯ ತಂದೆ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯ್, ಅಂಡರ್ ಗ್ರೌಂಡ್ ಪೈಪ್ ನ್ನು ಕೂಲರ್ ಗೆ ಅಳವಡಿಸಿರಬಹುದು. ಹೀಗಾಗಿ ಆ ಪೈಪ್ ಮೂಲಕವೇ ಹಾವಿನ ಮರಿ ಹೊಂದಿರಬಹುದು ಅಥವಾ ಕೂಲರ್ ಗೆ ಅಳವಡಿಸಿರುವ ಪೈಪ್ ಎಲ್ಲಾದರೂ ಒಡೆದಿರುವ ಸಾಧ್ಯತೆಗಳಿವೆ. ಈ ಕುರಿತು ಜಲ ನೈರ್ಮಲ್ಯ ಇಲಾಖೆಗೆ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ.
Jammu and Kashmir: Snake entered into a patient's bottle while he was filling it from a water cooler at District Hospital Udhampur. pic.twitter.com/ay1CifBIEk
— ANI (@ANI) October 15, 2017