ಚಿಕ್ಕಮಗಳೂರು: ಅತಿ ವಿಷಯುಕ್ತವಾದ ಕೊಳಕಮಂಡಲ ಹಾವೊಂದು ನಗರಸಭೆ ಕಚೇರಿಗೆ ಬಂದು ಅಧಿಕಾರಿಗಳನ್ನು ತಲ್ಲಣಗೊಳಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅಧಿಕಾರಿಗಳು ಎಂದಿನಂತೆ ಬೆಳಗ್ಗೆ ಕೆಲಸ ಆರಂಭಿಸಿದ್ದರು. ಆದರೆ ಕಂಪ್ಯೂಟರ್ ಸೆಕ್ಷನ್‍ನಲ್ಲಿ ಮಾನಿಟರ್ ಮೇಲಿಂದ ಕೆಳಗೆ ಇಳಿದ ಹಾವನ್ನು ಕಂಡು ಕಂಪ್ಯೂಟರ್ ಆಪರೇಟರ್ ಗಳು ಕೂಗಿಕೊಂಡು ಹೊರಗೆ ಓಡಿ ಬಂದಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನು ಹಿಡಿದಿದ್ದಾರೆ.
Advertisement
ಹಾವು ಅತಿ ಸಣ್ಣದಾಗಿದ್ದ ಪರಿಣಾಮ ಕಚೇರಿಯೊಳಗೆ ಟೇಬಲ್‍ಗಳ ಸಂದಿಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹೋದ ಪರಿಣಾಮ ಕಚೇರಿಯ ಕಡತಗಳು ಹಾಗೂ ಕಂಪ್ಯೂಟರ್‍ಗಳನ್ನು ಒಂದೆಡೆ ತೆಗೆದಿಟ್ಟು, ಅಲ್ಲಿಂದ ಟೇಬಲ್‍ಗಳನ್ನ ಹೊರಗಿಟ್ಟು, ಗೋಡೆಯನ್ನ ಒಡೆದು ಹಾಕಿ ಹಾವನ್ನ ಹಿಡಿದಿದ್ದಾರೆ.