ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿನ ವಿದ್ಯಾರ್ಥಿನಿಯರ ವಸತಿ ನಿಲಯದ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.
ಮಾನಸಗಂಗೋತ್ರಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಮಲಗಿದ್ದ ಮಂಚದ ಕೆಳಗೆ ದೊಡ್ಡದಾದ ನಾಗರಹಾವು ಬುಸುಗುಡುತ್ತಿತ್ತು. ಏನಿದು ಬುಸುಗುಡುವ ಸದ್ದು ಬರ್ತಿದೆ ಅಂತಾ ವಿದ್ಯಾರ್ಥಿನಿಯರು ಮಂಚದ ಕೆಳಗೆ ಇಣುಕಿ ನೋಡಿದಾಗ ಹಾವು ಮಲಗಿರುವುದು ಕಂಡಿದೆ. ತಕ್ಷಣ ಕೊಠಡಿಯಿಂದ ಓಡಿ ಹೊರ ಬಂದು ವಿದ್ಯಾರ್ಥಿನಿಯರು ಕಿರುಚಾಡಿದ್ದಾರೆ.
Advertisement
ವಾರ್ಡನ್ ತಕ್ಷಣ ಉರಗ ತಜ್ಞ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ನ ರಮೇಶ್ ಅವರು ಹಾವು ಹಿಡಿದು ವಿದ್ಯಾರ್ಥಿನಿಯರ ಆತಂಕವನ್ನ ದೂರ ಮಾಡಿದ್ದಾರೆ. ವಸತಿ ನಿಲಯದ ಸುತ್ತಾ ಗಿಡಗಂಟೆಗಳು ಬೆಳೆದಿದ್ದು ಶುಚಿತ್ವ ಕಾಪಾಡಿಕೊಳ್ಳದಿರುವುದೇ ಈ ರೀತಿ ಹಾವುಗಳು ವಸತಿ ನಿಲಯದ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ.
Advertisement
ಹಾವಿನಿಂದ ಯಾವ ವಿದ್ಯಾರ್ಥಿನಿಯರಿಗೂ ತೊಂದರೆ ಆಗಿಲ್ಲ.