– ಜಲೀಲನ ಕಳುಹಿಸಿಕೊಡಲು ನಾಗರಹಾವು ಬಂತಂತೆ
– ಆಪ್ತ ಗೆಳೆಯ ವಿಷ್ಣು ಬಂದಿದ್ದಾರೆ ಎಂದ ಅಭಿಮಾನಿಗಳು
ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವೇಳೆ ನಾಗರಹಾವು ಕಾಣಿಸಿಕೊಂಡಿತ್ತು. ನಾಗಾರಹಾವು ಕಂಡ ಅಭಿಮಾನಿಗಳು ಜಲೀಲನನ್ನು ನೋಡಲು ಆಪ್ತ ಗೆಳೆಯ ವಿಷ್ಣುವರ್ಧನ್ ಬಂದಿದ್ದಾರೆಂದು ಮಾತನಾಡಲು ಆರಂಭಿಸಿದ್ದಾರೆ.
ಅಂಬರೀಶ್ ಅವರ ಮೊದಲ ಚಿತ್ರ ನಾಗರಹಾವು. ಹಾಗಾಗಿ ಕಾಕತಾಳೀಯ ಎನ್ನುವಂತೆ ಕಾಣಿಸಿಕೊಂಡ ನಾಗರಹಾವು ನೋಡುಗರಲ್ಲಿ ಆಶ್ಚರ್ಯಚಕಿತರನ್ನಾಗಿ ಮಾಡುವಂತೆ ಮಾಡಿತು. ಈ ಹಿಂದೆ ಹಲವು ಬಾರಿ ವಿಷ್ಣುವರ್ಧನ್ ಸಮಾಧಿ ಬಳಿ ನಾಗರಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಉರಗ ತಜ್ಞ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.
Advertisement
Advertisement
ಫೆಬ್ರವರಿಯಲ್ಲಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಏನು ಬೇಕಾದರೂ ಕೇಳಿ, ವಿಷ್ಣು ಬಗ್ಗೆ ಕೇಳಬೇಡಿ ಅಂತ ಹೇಳಿದ್ದರು. ವಿಷ್ಣು ಬಗ್ಗೆ ಮಾತನಾಡುವಾಗ ಮನಸ್ಸು ಭಾರವಾಗುತ್ತದೆ. ಏನೇ ಹೇಳಬೇಕೆಂದು ಪದಗಳೇ ತೋಚಲ್ಲ. ಕೇವಲ ಕಣ್ಣೀರು ಬಂದ್ರೆ ಸ್ನೇಹಿತರಲ್ಲ, ಚಿತ್ರರಂಗದಲ್ಲಿ ನನಗೂ ಮತ್ತು ಅವನ ನಡುವಿನ ಸ್ನೇಹಕ್ಕೆ ಪದಗಳೇ ಇಲ್ಲ. ಆ ಕಾಲದಲ್ಲಿ ನಾವಿಬ್ಬರು ಹೀರೋಗಳು. ಬೇರೆ ಯಾರಾದರೂ ಆಗಿದ್ದರೆ ಸಿನಿಮಾಗಾಗಿ ಗಲಾಟೆ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಒಂದು ದಿನವೂ ನಾವಿಬ್ಬರು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದರು.
Advertisement
ಸೆನ್ಸ್ ಅಫ್ ಹ್ಯೂಮರ್ ನಲ್ಲಿ ವಿಷ್ಣು ನನಗಿಂತ ಎತ್ತರದಲ್ಲಿದ್ದಾನೆ. ಯಾರಾದರೂ ಇದ್ದರೆ ಸುಮ್ಮನೆ ಇರುತ್ತಿದ್ದ, ನಾನು ಮತ್ತು ಸುಮಲತಾ ಇದ್ದಾಗ ಬೇರೆಯವರು ಹೇಗೆ ಮಾತಾಡ್ತಾರೆ ಎಂಬುದನ್ನು ಮಿಮಿಕ್ರಿ ಮಾಡಿ ತೋರಿಸುತ್ತಿದ್ದನು. ಇಬ್ಬರು ಏಕಕಾಲದಲ್ಲಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು, ಅವನಿಗೂ ಇಷ್ಟು ದೊಡ್ಡ ಹೀರೋ ಅಗ್ತೀನಿ ಅಂತಾ ಗೊತ್ತಿರಲಿಲ್ಲ. ನಾನು ಹೀರೋ ಆಗ್ತೀನಿ ಅಂತ ನನಗೂ ಗೊತ್ತಿರಲಿಲ್ಲ. ಅಂದಿನಿಂದ ಶುರುವಾದ ಸ್ನೇಹ ಇಂದಿಗೂ ಮುಂದುವರಿದುಕೊಂಡು ಬಂದಿದೆ ಎಂದು ವಿಷ್ಣು ಮತ್ತು ತಮ್ಮ ಸ್ನೇಹದ ಬಗ್ಗೆ ಮಾತುಗಳನ್ನಾಡಿದ್ದರು.
Advertisement
https://www.youtube.com/watch?v=y7BaiZ-wkck
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv