ಧಾರವಾಡ: ನಾಗರ ಪಂಚಮಿ ದಿನ ಎಲ್ಲರೂ ಮಣ್ಣಿನ ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ನಿಜವಾಗಿಯೂ ಈ ಹಬ್ಬದ ದಿನವೇ ಮನೆಗೆ ನಾಗಪ್ಪ ಬಂದ್ರೆ ಹೇಗಾಗಬಾರದು ಹೇಳಿ.
ಹೌದು. ನಾಗರ ಪಂಚಮಿ ದಿನವೇ ಧಾರವಾಡದ ಗರಗ ಗ್ರಾಮದ ಮಡಿವಾಳೆಪ್ಪ ಎಂಬವರ ಮನೆಗೆ ನಾಗಪ್ಪ ಬಂದಿದ್ದಾನೆ. ಇದನ್ನ ಕಂಡು ಮೊದಲು ಭಯ ಪಟ್ಟ ಈ ಕುಟುಂಬದವರು ನಂತರ ಇದು ದೈವ ಸ್ವರೂಪ ಅಂತಾ ಹೇಳಿ ನಾಗಪ್ಪನಿಗೆ ಪೂಜೆ ಕೂಡ ಮಾಡಿದ್ದಾರೆ. ಪಂಚಮಿಯ ದಿನವೇ ಮನೆಗೆ ಈ ನಾಗಪ್ಪ ಬಂದಿದ್ದರಿಂದ ಆ ಮನೆ ಮಹಿಳೆಯರು ಆರತಿ ಬೆಳಗಿ ನಂತರ ಸ್ನೇಕ್ ತಜ್ಞ ಎಲ್ಲಪ್ಪ ಅವರನ್ನು ಕರೆಸಿ ನಾಗರಹಾವನ್ನ ಕಾಡಿಗೆ ಬಿಡಿಸಿದ್ದಾರೆ.
Advertisement
Advertisement
ಇದನ್ನ ನೋಡಲು ಗ್ರಾಮದ ಜನರು ಕೂಡಾ ಮುಗಿ ಬಿದ್ದಿದ್ರು. ಇನ್ನೂ ಕೆಲವರು ಈ ಎಲ್ಲಾ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Advertisement
ಹಾಗೆ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೂಡ ನಾಗರ ಪಂಚಮಿ ಸಂಭ್ರಮ ಜೋರಾಗಿದೆ. ನಾಗಪ್ರತಿಷ್ಟಾ ಮಂಟಪದಲ್ಲಿ ನಾಗನ ವಿಗ್ರಹಕ್ಕೆ ಭಕ್ತರು ಹಾಲನ್ನು ಎರೆದರು. ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ.