ಟೋಕಿಯೋ: ವಿದ್ಯುತ್ ಸ್ಟೇಷನ್‌ಗೆ ಹಾವು ನುಗ್ಗಿದ ಪರಿಣಾಮ ಸುಮಾರು 10,000 ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡ ಘಟನೆ ಜಪಾನ್‌ನಲ್ಲಿ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಹಾವು ಮೃತಪಟ್ಟಿದೆ.
ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ನಗರದ ನಿವಾಸಿಗಳು ವಿದ್ಯುತ್ ಸಮಸ್ಯೆ ಎದುರಿಸಿದರು. ತೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯ ತನಿಖಾಧಿಕಾರಿಗಳು ವಿದ್ಯುತ್ ಸ್ಥಗಿತಕ್ಕೆ ಕಾರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ವಿದ್ಯುತ್ ಸ್ಟೇಷನ್‌ಗೆ ಭೇಟಿ ಕೊಟ್ಟಾಗ ಕೆಲವು ಯಂತ್ರೋಪಕರಣಗಳಲ್ಲಿ ಹಾವಿನ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಇದನ್ನೂ ಓದಿ: ದೋಣಿ ದುರಂತ- ಮಕ್ಕಳು ಸೇರಿ 22 ಮಂದಿ ದುರ್ಮರಣ
ವಿದ್ಯುತ್ ತಂತಿ ತಗುಲಿ ಹಾವು ಸುಟ್ಟುಹೋಗಿದೆ. ಪರಿಣಾಮವಾಗಿ ಸ್ಟೇಷನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದರಿಂದಾಗಿ ಸುಮಾರು 10 ಸಾವಿರ ಮನೆಗಳ ನಿವಾಸಿಗಳು ವಿದ್ಯುತ್ ಕಡಿತದಿಂದ ಸಮಸ್ಯೆ ಎದುರಿಸಬೇಕಾಯಿತು.
ಹಾವಿನ ಕುರಿತಾದ ಸುದ್ದಿಯು ನಿವಾಸಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ನಗರದ ವಿದ್ಯುತ್ ಸೌಲಭ್ಯಗಳನ್ನು ಹಾವು ಎಷ್ಟು ಸುಲಭವಾಗಿ ನಿಷ್ಕ್ರಿಯಗೊಳಿಸಿದೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೀಸಸ್ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ