ವಾಷಿಂಗ್ಟನ್: ಅಮೆರಿಕದ ಗಾಯಕಿ ಮೇಟಾ ಅವರು ಹಾಡಿನ ಚಿತ್ರೀಕರಣ ಮಾಡುತ್ತಿದ್ದಾಗ ಅವರ ಮುಖಕ್ಕೆ ಹಾವೊಂದು ಕಚ್ಚಿದೆ.
21 ವರ್ಷದ ಗಾಯಕಿ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಮೇಟಾ ಅವರು ಎಂದಿಗೂ ಹೀಗೆ ಆಗಿಲ್ಲ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ವೀಡಿಯೋವೂ 5 ಸೆಕೆಂಡ್ ಇದೆ. ಹಾವನ್ನು ತನ್ನ ಮೈಮೇಲೆ ಬಿಟ್ಟುಕೊಂಡು ಮೇಟಾ ಹಾಡಿನ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ?:
ಮೇಟಾ ಕಪ್ಪು ಬಣ್ಣದ ಉಡುಗೆಯೊಂದನ್ನು ಹಾಕಿಕೊಂಡು ಹಾಡೊಂದು ಹಾಡಲು ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರ ಸಹಾಯಕನ ಬಳಿ 2 ಹಾವುಗಳಿತ್ತು. ಅದರಲ್ಲಿ ಆತ ಬಿಳಿ ಬಣ್ಣದ ಹಾವನ್ನು ಅವರತ್ತ ಬಿಡಲು ಹೋಗಿದ್ದಾನೆ. ಅದರಲ್ಲಿದ್ದ ಕಪ್ಪು ಬಣ್ಣದ ಹಾವು ಗಾಯಕಿಯ ಮುಖಕ್ಕೆ ಕಚ್ಚಿದೆ. ಆದರೆ ಈ ಹಾವು ವಿಷಪೂರಿತವಲ್ಲವಾದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ
Advertisement
Advertisement
ಈ ವರ್ಷದ ಆರಂಭದಲ್ಲಿ ಗಾಯಕಿ ಟೀನ್ ಸೀನ್, ಟಾಕ್ಸಿಕ್ ಮತ್ತು ಹ್ಯಾಬಿಟ್ಸ್ ನಂತಹ ಹಾಡುಗಳನ್ನು ಒಳಗೊಂಡಿರುವ ತಮ್ಮ ಚೊಚ್ಚಲ ಆಲ್ಬಂ ಹ್ಯಾಬಿಟ್ಸ್ ಅನ್ನು ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್