ಚಿಕ್ಕಮಗಳೂರು: ಮುಂಗುಸಿ ಹಾಗೂ ನಾಗರಹಾವಿನ ನಡುವೆ ಭಯಂಕರ ಕಾದಾಟ ನಡೆದ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.
ಮುಂಗುಸಿ ಗದ್ದೆ ಬದಿಯಲ್ಲಿ ನಾಗರಹಾವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮುಂಗುಸಿಯಿಂದ ತಪ್ಪಿಸಿಕೊಳ್ಳಲು ನಾಗರಹಾವು ಕಾದಾಟ ನಡೆಸಿದೆ. ನಾಗರಹಾವು ಹಾಗೂ ಮುಂಗುಸಿ ನಡುವಿನ ಕಾಳಗ ಕಂಡು ರೈತರು ಗಾಬರಿಗೊಂಡಿದ್ದರು.
ಗದ್ದೆಯಲ್ಲಿದ್ದ ಯುವಕರು ಮುಂಗುಸಿ ಹಾಗೂ ನಾಗರಹಾವಿನ ಕಾದಾಟದ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇತ್ತೀಚೆಗೆ ಮೈಸೂರಿನ ನಾಗರಹೊಳೆ ಅರಣ್ಯದಲ್ಲಿ ಹೆಬ್ಬಾವನ್ನು ನೋಡಿ ಹುಲಿ ಹೆದರಿಕೊಂಡ ಅಪರೂಪದ ದೃಶ್ಯವೊಂದು ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯದಲ್ಲಿ ಹುಲಿಗೆ ಹೆಬ್ಬಾವು ಎದುರಾಗಿದೆ. ಈ ವೇಳೆ ಹೆಬ್ಬಾವನ್ನು ಕಂಡು ಹುಲಿ ಹೆದರಿಕೊಂಡಿತ್ತು. ಪ್ರವಾಸಿಗರು ಹೆಬ್ಬಾವು ಮತ್ತು ಹುಲಿಯನ್ನು ಒಟ್ಟಿಗೆ ನೋಡಿದ್ದು, ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ಕಂಡರೆ ಅದನ್ನು ತಿನ್ನುತ್ತದೆ. ಆದರೆ ಇಲ್ಲಿ ಹುಲಿ ಹೆಬ್ಬಾವನ್ನು ಕಂಡು ಹೆದರುಕೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv