ನವದೆಹಲಿ: ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ (BJP) ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ 163 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ (Congress) 66 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರಾನೇರ ಫೈಟ್‌ನಲ್ಲಿ ಹಲವು ಜನರು ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಇನ್ನೂ ಕೆಲ ನಾಯಕರು ಸಣ್ಣ ಅಂತರದಲ್ಲಿ ಗೆದ್ದಿದ್ದಾರೆ. ಅಂತಹ ಕೆಲವು ನಿರ್ಣಾಯಕ ಗೆಲವುಗಳು ಇಲ್ಲಿದೆ.
ರಾಜ್ಯದಲ್ಲಿ ಅತಿ ದೊಡ್ಡ ಗೆಲುವು ರಮೇಶ್ ಮೆಂಡೋಲಾ (Ramesh Mendola) ಅವರದ್ದಾಗಿದೆ. ಮೆಂಡೋಲಾ ಅವರು ಇಂದೋರ್ ವಿಧಾನಸಭೆ ಸಂಖ್ಯೆ 2 ರಿಂದ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್‌ನ ಚಿಂಟು ಚೌಕ್ಸೆ ಅವರನ್ನು 1,07,047 ಮತಗಳಿಂದ ಸೋಲಿಸಿದ್ದಾರೆ. ಎರಡನೇ ಅತಿ ದೊಡ್ಡ ಗೆಲುವು ಬಿಜೆಪಿಯ ಕೃಷ್ಣ ಗೌರ್ ಅವರದ್ದು. ಭೋಪಾಲ್‌ನ ಗೋವಿಂದಪುರದಿಂದ ಸ್ಪರ್ಧಿಸಿದ್ದ ಕೃಷ್ಣ ಅವರು ಕಾಂಗ್ರೆಸ್‌ನ ರವೀಂದ್ರ ಸಾಹು ಅವರನ್ನು 1,06,668 ಮತಗಳಿಂದ ಸೋಲಿಸಿದರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು – ಜೋತಿರಾದಿತ್ಯ ಸಿಂಧಿಯಾ ಬಣಕ್ಕೆ ಖುಷಿ ಕೊಡದ ಫಲಿತಾಂಶ
Advertisement
Advertisement
ಮೂರನೇ ದೊಡ್ಡ ಗೆಲುವು ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರದ್ದಾಗಿದೆ. ಸೆಹೋರ್ ಜಿಲ್ಲೆಯ ಬುಧ್ನಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ನ ವಿಕ್ರಮ್ ಮಸ್ತಲ್ ಅವರನ್ನು 1,04,974 ಮತಗಳಿಂದ ಸೋಲಿಸಿದರು. ನಾಲ್ಕನೇ ಪ್ರಮುಖ ಗೆಲುವು ಭೋಪಾಲ್‌ನ ಹುಜೂರ್ ವಿಧಾನಸಭೆಯಿಂದ ಸ್ಪರ್ಧಿಸಿದ್ದ ರಾಮೇಶ್ವರ ಶರ್ಮಾ ಅವರದ್ದು. ಅವರು 97,910 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ನರೇಶ್ ಜ್ಞಾನಚಂದಾನಿ ಅವರನ್ನು ಸೋಲಿಸಿದ್ದಾರೆ. 9ನೇ ಬಾರಿಗೆ ಶಾಸಕರಾದ ಗೋಪಾಲ್ ಭಾರ್ಗವ ಅವರು ಸಾಗರ್ ಜಿಲ್ಲೆಯ ರಾಹ್ಲಿಯಿಂದ ಸ್ಪರ್ಧಿಸಿದರು ಮತ್ತು ಕಾಂಗ್ರೆಸ್‌ನ ಜ್ಯೋತಿ ಪಟೇಲ್ ಅವರನ್ನು 72,800 ಮತಗಳಿಂದ ಸೋಲಿಸಿದರು. ಇದನ್ನೂ ಓದಿ: ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್
Advertisement
ಕೆಲವು ಅಭ್ಯರ್ಥಿಗಳು ಲಕ್ಷಗಟ್ಟಲೆ ಮತಗಳಿಂದ ಗೆದ್ದರೆ, ಇನ್ನೂ ಕೆಲವು ನಾಯಕರು ಕೆಲವು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಶಾಜಾಪುರ ಅಭ್ಯರ್ಥಿ ಅರುಣ್ ಭೀಮಾವತ್ ಅವರು ಅತ್ಯಂತ ಸಣ್ಣ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಹುಕುಂಸಿಂಗ್ ಕಾರದ ಅವರನ್ನು 28 ಮತಗಳಿಂದ ಸೋಲಿಸಿದ್ದಾರೆ. ಎರಡನೇ ನಿಕಟ ಗೆಲುವು ಕೂಡ ಬಿಜೆಪಿಯದೇ ಆಗಿದೆ. ವಾರಶಿವಾಣಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರದೀಪ್ ಜೈಸ್ವಾಲ್ ಅವರು ಕಾಂಗ್ರೆಸ್‌ನ ವಿವೇಕ್ ಪಟೇಲ್ ಅವರನ್ನು 46 ಮತಗಳಿಂದ ಸೋಲಿಸಿದ್ದು, ಅದೂ ಕೂಡಾ ಮರು ಎಣಿಕೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಇದನ್ನೂ ಓದಿ: Mizoram Election Results: ʻಕೈʼ ಹಿಡಿಯದ ಮಿಜೋರಾಂ – ZPMಗೆ ಗೆಲುವು, 2 ಕ್ಷೇತ್ರಗಳಲ್ಲಿ ಅರಳಿದ ಕಮಲ
Advertisement
ರಾಜ್ಯದಲ್ಲಿ ಮೂರನೇ ಅತಿ ಚಿಕ್ಕ ಗೆಲುವು ಕಾಂಗ್ರೆಸ್‌ನ ದಿನೇಶ್ ಜೈನ್ ಅವರದ್ದು. ಮಹಿದ್‌ಪುರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಬಹದ್ದೂರ್ ಸಿಂಗ್ ಚೌಹಾಣ್ ಅವರನ್ನು 290 ಮತಗಳಿಂದ ಸೋಲಿಸಿದರು. ನಾಲ್ಕನೇ ಚಿಕ್ಕ ಗೆಲುವು ಧರ್ಮಪುರಿಯ ಕಲುಸಿಂಗ್ ಠಾಕೂರ್ ಅವರದ್ದು. ಅವರು ಕಾಂಗ್ರೆಸ್‌ನ ಪಂಚಿಲಾಲ್ ಮೇದಾ ಅವರನ್ನು 356 ಮತಗಳಿಂದ ಸೋಲಿಸಿದರು. ಐದನೇ ಅತಿ ಚಿಕ್ಕ ಗೆಲುವು ಕಾಂಗ್ರೆಸ್ ನಾಯಕ ಸಂಜಯ್ ಅವರದ್ದು. ಬಿಜೆಪಿಯ ಭಗತ್ ಸಿಂಗ್ ನೇತಮ್ ಅವರನ್ನು 551 ಮತಗಳಿಂದ ಸೋಲಿಸಿದರು. ಇದನ್ನೂ ಓದಿ: ಗೆದ್ದ ಮರುದಿನವೇ ರಸ್ತೆಬದಿಯಲ್ಲಿನ ಮಾಂಸದಂಗಡಿಗಳ ತೆರವಿಗೆ ಬಿಜೆಪಿ ನೂತನ ಶಾಸಕ ಆದೇಶ