DistrictsGadagKarnatakaLatestMain Post

ನೀನಾ, ನಾನಾ ಅಂತ ಕಾಳಗಕ್ಕಿಳಿದ ಹಾವು, ನಾಯಿ – ಸಾವಿನಲ್ಲಿ ಅಂತ್ಯ

Advertisements

ಗದಗ: ಸಾಮಾನ್ಯವಾಗಿ ಹಾವು, ಮುಂಗುಸಿ ಕಾದಾಟ ನಡೆಸುವುದನ್ನು ನೋಡಿರುತ್ತೀರಾ. ಅಷ್ಟೇ ಯಾಕೆ ಹದ್ದು ಮತ್ತು ಹಾವು ಜಗಳ ಆಡಿರುವುದನ್ನು ನೋಡಿರುತ್ತೀರಾ. ಆದರೆ ಹಾವು ಹಾಗೂ ನಾಯಿ ನೀನಾ, ನಾನಾ ಎಂದು ಪರಸ್ಪರ ಜಗಳ ಆಡಿರುವುದನ್ನು ಎಲ್ಲಾದರೂ ನೋಡಿದ್ದೀರಾ? ಹಾಗದರೆ ಈ ಸ್ಟೋರಿ ಓದಿ..

ಹೌದು, ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹಾವು ಮತ್ತು ನಾಯಿ ಪರಸ್ಪರ ಕಿತ್ತಾಟ ನಡೆಸಿದೆ. ಗ್ರಾಮದ ಜಮೀನಿ ಹಾವು ನೋಡಿದ ನಾಯಿ ಕಾಳಗಕ್ಕಿಳಿದಿದೆ. ಈ ವೇಳೆ ನಾಯಿಯನ್ನು ನೋಡಿ ಹಾವು ಬುಸುಗುಡುತ್ತಿದ್ದರೆ, ಕೊಂಚವು ಹಿಂದೆ ಸರಿಯದೇ ನಾಯಿ ನಾನು ನೀನಗೇನು ಕಡಿಮೆ ಎಂಬಂತೆ ಗುರ್ ಗುರ್ ಎಂದು ರೊಚ್ಚಿಗೆದಿದೆ. ಇನ್ನೂ ಈ ದೃಶ್ಯ ನೋಡಿ ಗ್ರಾಮಸ್ಥರು ಕೂಡ ಭಯಭೀತರಾಗಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ

ರೈತ ಶೇಖಪ್ಪ ಚಲವಾದಿ ತನ್ನ ನಾಯಿಯೊಂದಿಗೆ ಜಮೀನಿಗೆ ಬಂದ ಸಂದರ್ಭ ನಾಗರಹಾವು ಕಾಣಿಸಿಕೊಂಡಿದ್ದು, ನಾಯಿ ಹಾವಿನ ಜೊತೆ ಸೆಣಸಾಡಿದೆ. ನಾಯಿ ಹಾವಿನ ಬಾಲ ಕಚ್ಚಿ ಗಾಯಗೊಳಿಸಿದರೆ, ಹಾವು ಕೂಡ ನಾಯಿಯ ಮೇಲೆ ನಿರಂತರವಾಗಿ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಈ ಎರಡು ಉಭಯ ಪ್ರಾಣಿಗಳನ್ನು ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಅಂಜದೇ ಎರಡು ಪ್ರಾಣಿ ಜಿದ್ದಾ-ಜಿದ್ದಿ ನಡೆಸಿದೆ. ಕೊನೆಗೆ ಸೋಲು ಅನುಭವಿಸಲು ಇಷ್ಟಪಡದ ಎರಡು ಪ್ರಾಣಿಗಳ ಕಾದಾಟ ಸಾವಿನಲ್ಲಿ ಅಂತ್ಯ ಕಂಡಿದೆ.

ಕೂಡಲೇ ರೈತ ಶೇಖಪ್ಪ ಚಲವಾದಿ ಜಮೀನಿಗೆ ಪಶು ವೈದ್ಯರನ್ನು ಕರೆಯಿಸಿ ತನ್ನ ಸಾಕು ನಾಯಿಯ ಜೀವ ಉಳಿಸಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ನಾಯಿ ಸಾವನ್ನಪ್ಪಿದೆ. ಕಣ್ಣ ಮುಂದೆಯೇ ತಮ್ಮ ಪ್ರೀತಿಯ ನಾಯಿ ಮೃತಪಟ್ಟಿದ್ದು, ಶೇಖಪ್ಪರಿಗೆ ಭಾರೀ ಆಘಾತವಾಗಿದೆ. ಇದನ್ನೂ ಓದಿ: WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

Live Tv

Leave a Reply

Your email address will not be published.

Back to top button