Districts

ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ

Published

on

Share this

ಕೋಲಾರ: ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಡವರು, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ ಎಂದು ಕಾಂಗ್ರೆಸ್ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಕೋಲಾರದ ಬಂಗಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ಜನ ಸಾಮಾನ್ಯರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಸ್ಥರವಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರು, ಜನ ಸಾಮಾನ್ಯರ ಪಾಲಿಗೆ ಕ್ರೂರ ಸ್ವರೂಪದ, ರೌದ್ರವಾತಾರ ದಂತ್ತಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

ಪೆಟ್ರೋಲ್, ಡಿಸೇಲ್ ಸೇರಿದಂತೆ ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆ ಆಕಾಶಕ್ಕೆ ಏರಿಕೆಯಾಗಿದೆ. ರೈತರು, ಬಡವರ ಕೂಗು ಈ ಸರ್ಕಾರಕ್ಕೆ ಕೇಳುತ್ತಿಲ್ಲ, ಹೀಗಾಗಿ ಈ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಸಾರ್ಕಾರ ಬಂದಾಗಿನಿಂದಲೂ ಕೇವಲ ಹಣ ಮಾಡುವುದು, ಸುಳ್ಳು ಸುದ್ದಿಗಳನ್ನ ಹರಡುವುದರಲ್ಲಿ ನಿರತವಾಗಿದೆ. ಬಿಜೆಪಿ ಶಾಸಕರು, ಸಂಸದರು ಕೇವಲ ಉಢಾಫೆ ಉತ್ತರಗಳನ್ನ ಕೊಡುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

ಸರ್ಕಾರದ ಮೇಲೆ ಒತ್ತಡ ಹಾಕಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ತೈಲ ಕಂಪನಿಗಳ ಲಾಭಿಯಲ್ಲಿ ಈ ಸರ್ಕಾರಗಳು ನಡೆಯುತ್ತಿವೆ. ಸಿಎಂ ಹಾದಿಯಾಗಿ ಬಿಜೆಪಿ ಶಾಸಕರು, ಸಂಸದರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಉಡಾಫೆ ಉತ್ತರ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ. ವ್ಯಾಕ್ಸಿನ್ ಇದೆ ಸಿರಂಜ್ ಕೊಡುತ್ತಿಲ್ಲ, ಈ ಸರ್ಕಾರಗಳಿಗೆ ಸಿರಂಜು ಸರಬರಾಜು ಮಾಡುವ ಸೌಜನ್ಯ ಇಲ್ಲ. ನನ್ನ ಮತ ಕ್ಷೇತ್ರದಲ್ಲಿ ಬೇಕಾದ ಸಿರಂಜು ವ್ಯವಸ್ಥೆಯನ್ನ ನಾನೆ ಮಾಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement