ನವದೆಹಲಿ: ವಿದೇಶದಲ್ಲಿ ನೀವು ಆಸ್ತಿ ಹೊಂದಿದ್ದರೆ ಅದರ ವಿವರವನ್ನು ಒಂದು ತಿಂಗಳ ಒಳಗಡೆ ಆದಾಯ ತೆರಿಗೆ ಇಲಾಖೆಗೆ (Income Tax Department) ಸಲ್ಲಿಸಿ. ಇಲ್ಲದಿದ್ದರೆ ನೀವು ಭಾರೀ ಪ್ರಮಾಣದ ದಂಡವನ್ನು (Heavy Penalty) ಕಟ್ಟಬೇಕಾಗುತ್ತದೆ.
ಕಪ್ಪು ಹಣದ (Black Money) ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಈಗ ವಿದೇಶದಲ್ಲಿ ಆಸ್ತಿ (Foreign Assets) ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ವಿದೇಶಗಳಲ್ಲಿ ಆಸ್ತಿ ಹೊಂದಿರುವ ಅಥವಾ ಹಣಕಾಸು ಖಾತೆಗಳನ್ನು ನಿರ್ವಹಿಸುವ ಸಾವಿರಾರು ಭಾರತೀಯರಿಗೆ ಆದಾಯ ತೆರಿಗೆ ಇಲಾಖೆ ಇಂದಿನಿಂದ ಸಂದೇಶವನ್ನು ಕಳುಹಿಸಲು ಆರಂಭಿಸಿದೆ.
ಡಿಸೆಂಬರ್ 31ರೊಳಗೆ ಎಲ್ಲಾ ವಿದೇಶಿ ಆಸ್ತಿಗಳನ್ನು ಸರಿಯಾಗಿ ಘೋಷಿಸಿ ಅಥವಾ ಭಾರೀ ಪ್ರಮಾಣದ ದಂಡವನ್ನು ಪಾವತಿಸಲು ಸಿದ್ಧರಾಗಿ ಎಂದು ಸಂದೇಶದಲ್ಲಿ ಕಳುಹಿಸಲಾಗಿದೆ. ಭಾರತದಲ್ಲಿ ತೆರಿಗೆ ಪಾವತಿಸಿ ವಿದೇಶದಲ್ಲಿ ಆಸ್ತಿ ಹೊಂದಿದವರಿಗೆ ಮಾತ್ರ ಈ ಎಚ್ಚರಿಕೆ ಅನ್ವಯವಾಗುತ್ತದೆ. ಭಾರತದಲ್ಲಿ ತೆರಿಗೆ ಪಾವತಿಸದ ಅನಿವಾಸಿ ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನೂ ಓದಿ: ಟ್ರಂಪ್ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿ
🔷 The Central Board of Direct Taxes (CBDT) launches the second NUDGE (Non-intrusive Usage of Data to Guide and Enable) initiative to strengthen voluntary compliance.
🔷 Analysis of AEOI information for FY 2024-25 (CY 2024) has identified high-risk cases where foreign assets… pic.twitter.com/xmkFBYYIL9
— Income Tax India (@IncomeTaxIndia) November 27, 2025
2024–25ರ ಹಣಕಾಸು ವರ್ಷದ ಸ್ವಯಂಚಾಲಿತ ಮಾಹಿತಿ ವಿನಿಮಯ (AEOI) ಡೇಟಾವನ್ನು ವಿಶ್ಲೇಷಿಸಿದ ನಂತರ ಇಲಾಖೆಯು ಸುಮಾರು 25 ಸಾವಿರ ಹೈ-ರಿಸ್ಕ್ ತೆರಿಗೆದಾರರನ್ನು ಪತ್ತೆ ಹಚ್ಚಿತ್ತು. ಇವರ ವಿದೇಶಿ ಆಸ್ತಿಗಳು 2025–26 ರಲ್ಲಿ ಸಲ್ಲಿಸಿದ ಐಟಿ ರಿಟರ್ನ್‌ಗೆ ಹೊಂದಿಕೆಯಾಗದ ಕಾರಣ ಈ ಸಂದೇಶಗಳನ್ನು ಕಳುಹಿಸುತ್ತಿದೆ.
ವಿದೇಶದಲ್ಲಿರುವ ಆಸ್ತಿ ಮತ್ತು ಅಲ್ಲಿಂದ ಬಂದ ಆದಾಯವನ್ನು ತೋರಿಸಲು ಇದೊಂದು ಕೊನೆಯ ಅವಕಾಶ ಎಂದು ಎಂದು CBDT ಹೇಳಿದೆ. ಕಪ್ಪು ಹಣ ಮತ್ತು ತೆರಿಗೆ ಹೇರಿಕೆ ಕಾಯ್ದೆ 2015 ರ ಅಡಿಯಲ್ಲಿ, ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಲು ವಿಫಲವಾದರೆ 10 ಲಕ್ಷ ರೂ.ಗಳ ದಂಡ, ಜೊತೆಗೆ 30 ಪ್ರತಿಶತ ತೆರಿಗೆ ಮತ್ತು ಪಾವತಿಸಬೇಕಾದ ತೆರಿಗೆಯ ಮೇಲೆ 300 ಪ್ರತಿಶತದಷ್ಟು ದಂಡ ವಿಧಿಸಲು ಅವಕಾಶವಿದೆ. ಜೂನ್ 2025 ರವರೆಗೆ ಆದಾಯ ತೆರಿಗೆ ಇಲಾಖೆ ಸುಮಾರು 1,080 ಪ್ರಕರಣಗಳನ್ನು ಗುರುತಿಸಿ ಸುಮಾರು 40,000 ಕೋಟಿ ರೂ.ಗಳ ತೆರಿಗೆ ವಂಚನೆಯಾಗಿರುವುದನ್ನು ಪತ್ತೆ ಹಚ್ಚಿತ್ತು. ಇದನ್ನೂ ಓದಿ: ಡಿಸೆಂಬರ್ 4, 5 ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ
ಹಲವಾರು ವರ್ಷಗಳಿಂದ ದುಬೈನಲ್ಲಿ ವಿದೇಶಿ ಆಸ್ತಿ ಖರೀದಿದಾರರ ಪಟ್ಟಿಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ. 2024 ರಲ್ಲಿ ಭಾರತೀಯ ಖರೀದಿದಾರರು ಎಲ್ಲಾ ದುಬೈ ಆಸ್ತಿ ವಹಿವಾಟುಗಳಲ್ಲಿ 22% ರಷ್ಟು ಪಾಲನ್ನು ಹೊಂದಿದ್ದರು ಮಾತ್ರವಲ್ಲದೇ ಸರಿಸುಮಾರು 150 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ದುಬೈ ಭೂ ಇಲಾಖೆ ಹೇಳಿತ್ತು. ಈ ಖರೀದಿದಾರರಲ್ಲಿ ಹಲವರು ಭಾರತದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ. ಇವರು ಭಾರತದಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವಾಗ ವಿದೇಶಿ ಆಸ್ತಿಗಳು ಮತ್ತು ವಿದೇಶಿ ಮೂಲ ಆದಾಯವನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.

