ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಮುಂದೂಡಿದ ಬಳಿಕ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ಕೈಯಲ್ಲಿ ಎಂಗೇಜ್‌ಮೆಂಟ್ ರಿಂಗ್ ಕಾಣ್ತಿಲ್ಲ ಯಾಕೆ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ.
ಮಂಧಾನ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಪ್ರಮುಖ ಟೂತ್‌ಪೇಸ್ಟ್ ಬ್ರ್ಯಾಂಡ್‌ವೊಂದರ ಜಾಹೀರಾತು ಪ್ರಚಾರವಾಗಿದೆ. ಆದರೆ, ಈ ವೀಡಿಯೋದಲ್ಲಿ ಮಂಧಾನ ಕೈ ಬೆರಳಿನಲ್ಲಿ ಉಂಗುರ ಇಲ್ಲದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಜಾಹೀರಾತನ್ನು ನಿಶ್ಚಿತಾರ್ಥ ನಡೆಯುವ ಮೊದಲು ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಆದಾಗ್ಯೂ, ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಸ್ಮೃತಿ ಮಂಧಾನಗೆ ವಂಚಿಸಿದ್ರಾ ಪಾಲಶ್ ಮುಚ್ಚಲ್?
View this post on Instagram
12 ದಿನಗಳ ಹಿಂದೆ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಮುಂದೂಡಲಾಯಿತು. ಏತನ್ಮಧ್ಯೆ, ಸ್ಮೃತಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಿದ್ದರು. ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಯಿತು. ಎರಡೂ ಕುಟುಂಬಗಳ ಸದಸ್ಯರು ಆರೋಗ್ಯ ತುರ್ತು ಪರಿಸ್ಥಿತಿಗಳಿಂದಾಗಿ ವಿವಾಹ ಮುಂದೂಡಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ನ.23 ರಂದು ಸಾಂಗ್ಲಿಯಲ್ಲಿ ಸ್ಮೃತಿ ಹಾಗೂ ಪಲಾಶ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ದಿನ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗಾಗಿ, ಮದುವೆ ಮುಂದೂಡಲಾಯಿತು. ಅದಾದ ಕೆಲ ದಿನಗಳ ನಂತರ ಪಲಾಶ್ ಕೂಡ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರು. ಇದನ್ನೂ ಓದಿ: ತಂದೆಗೆ ಹೃದಯಾಘಾತ – ಇಂದು ನಡೆಯಬೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
ಸ್ಮೃತಿ ಮಂಧಾನ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಇದುವರೆಗೂ ಮಂಧಾನ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.


