ಸೌತಾಂಪ್ಟನ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅಗ್ರ ಕ್ರಮಾಂಕದ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಮಹಿಳೆಯರ ʻದಿ ಹಂಡ್ರೆಂಡ್ʼ (The Women’s Hundred) ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸುವ ಮೂಲಕ ವಿಶೇಷ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 5 ಅರ್ಧಶತಕಗಳೊಂದಿಗೆ 500 ರನ್ ಬಾರಿಸಿ, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ (Women Cricketer) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Advertisement
ದಿ ವುಮೆನ್ಸ್ ಹಂಡ್ರೆಡ್ ಟೂರ್ನಿಯ 3ನೇ ಆವೃತ್ತಿಯಲ್ಲಿ ಸೌಥೆರ್ನ್ ಬ್ರೇವ್ (Southern Brave) ತಂಡದ ಪರ ಆಡುತ್ತಿರುವ ಸ್ಮೃತಿ ಮಂಧಾನಾ, 17 ಪಂದ್ಯಗಳಿಂದ 503 ರನ್ ಬಾರಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನ ಸಿಡಿಸಿದ್ದಾರೆ. 2021ರಲ್ಲಿ 8 ಪಂದ್ಯಗಳಿಂದ 167 ಹಾಗೂ 2022ರಲ್ಲಿ 211 ರನ್ ಬಾರಿಸಿದ್ದ ಮಂಧಾನಾ, ಈ ಟೂರ್ನಿಯಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಮತ್ತೋರ್ವ ಆಟರ್ಗಾತಿ ಜೆಮಿಮಾ ರೊಡ್ರಿಗಸ್ ಸಿಡಿಸಿದ್ದ 4 ಅರ್ಧಶತಕಗಳ ದಾಖಲೆಯನ್ನೂ ಮುರಿದಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್
Advertisement
Advertisement
ಶುಕ್ರವಾರ ವೆಲ್ಷ್ ಫೈರ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ 33 ಎಸೆತಗಳಲ್ಲಿ 50 ರನ್ ಬಾರಿಸಿದರು. 166.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಮಂಧಾನ 42 ಎಸೆತಗಳಲ್ಲಿ 70 ರನ್ ಚಚ್ಚಿದರೂ ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡಿದ ವೆಲ್ಷ್ ಫೈರ್ ತಂಡವು 100 ಎಸೆತಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದ್ರೆ, ಸೌಥೆರ್ನ್ಸ್ 100 ಎಸೆತಗಳಲ್ಲಿ 161 ರನ್ ಗಳಿಸಿ 4 ರನ್‌ಗಳ ವಿರೋಚಿತ ಸೋಲನುಭವಿಸಿತು.
Advertisement
ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ವಿರುದ್ಧ ಕಣಕ್ಕಿಳಿದಿದ್ದ ಮಂಧಾನ 36 ಎಸೆತಗಳಲ್ಲಿ 152.77 ಸ್ಟ್ರೈಕ್‌ರೇಟ್‌ನೊಂದಿಗೆ 55 ರನ್ ಗಳಿಸಿ ತಂಡವನ್ನ ಗೆಲ್ಲಿಸಿದ್ದರು. ಇದನ್ನೂ ಓದಿ: ಸೂಪರ್ ಸ್ಟಾರ್ ಸ್ಮೃತಿ ಮಂಧಾನಗೆ ICC ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ
Web Stories