ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ (Indian Womens Cricket Team) ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಐಸಿಸಿ (ICC) ರ‍್ಯಾಂಕಿಂಗ್‌ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಟಿ20 ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಐಸಿಸಿ ಪ್ರಕಟಿಸಿದ ರ‍್ಯಾಂಕ್ (ICC Ranking) ಪಟ್ಟಿಯಲ್ಲಿ ವಿಶ್ವದ ಬ್ಯಾಟರ್‌ಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ (Cricket) 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: ಸ್ಮೃತಿ ಮಂಧಾನಗೆ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ
100% Cricket Superstar Smriti Mandhana is on the rise in the latest @MRFWorldwide ICC Women's Player Rankings ????
Details ????
— ICC (@ICC) September 20, 2022
ಆಸ್ಟ್ರೇಲಿಯಾ ಕ್ರಿಕೆಟರ್ ಬೆತ್ ಮೂನಿ 743 ಶ್ರೇಯಾಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, 731 ಶ್ರೇಯಾಂಕಗಳನ್ನು ಗಳಿಸಿರುವ ಸ್ಮೃತಿ ಮಂಧಾನ 2ನೇ ಸ್ಥಾನದಲ್ಲಿ ಮಿಂಚಿದ್ದಾರೆ. ಐಸಿಸಿಯ 2021ರ ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಸ್ಮೃತಿ ಮಂಧಾನ ಇದೀಗ ವೃತ್ತಿ ಜೀವನದ ಸಾಧನೆ ಮಾಡಿದ್ದಾರೆ. ಟಿ20 ಅಗ್ರಕ್ರಮಾಂಕದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಸರಣಿಯ 3 ಪಂದ್ಯಗಳಲ್ಲಿ 111 ರನ್‌ಗಳಿಸಿದ್ದು, ಐಸಿಸಿ ರ‍್ಯಾಂಕಿಂಗೆ ಇನ್ನಷ್ಟು ಸಹಕಾರಿಯಾಯಿತು. ಹಾಗೆಯೇ ಏಕದಿನ ಕ್ರಿಕೆಟರ್‌ಗಳ ಪಟ್ಟಿಯಲ್ಲೂ ಟಾಪ್-10ನಲ್ಲಿರುವ ಮಂಧಾನ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ 91 ರನ್‌ಗಳಿಸಿ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: T20 WorldCupಗೆ ಡಿಕೆ ಓಕೆ, ರಿಷಭ್ ಯಾಕೆ – ಪಂತ್ ಕೈಬಿಡೋದು ಸೂಕ್ತ ಅಂದ ಮಾಜಿ ಕ್ರಿಕೆಟಿಗ
ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ 13ನೇ ಸ್ಥಾನದಲ್ಲಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) 9ನೇ ಸ್ಥಾನಕ್ಕೆ ಜಿದ್ದಾರೆ. ಆಲ್‌ರೌಂಡರ್ ದೀಪ್ತಿ ಶರ್ಮಾ 33 ರಿಂದ 32ನೇ ಸ್ಥಾನಕ್ಕೆ ಹಾಗೂ ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ 45 ರಿಂದ 37ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದೀಪ್ತಿ 12ನೇ ಸ್ಥಾನಕ್ಕೆ ಜಿಗಿದು ಸಾಧನೆ ಮಾಡಿದ್ದಾರೆ.
ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಹರ್ಮನ್ ಪ್ರೀತ್ ಕೌರ್ 14ನೇ ಸ್ಥಾನಕ್ಕೆ, ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ 10ನೇ ಸ್ಥಾನಕ್ಕೆ ಹಾಗೂ ರಾಧಾ ಯಾದವ್ 14ನೇ ಸ್ಥಾನಕ್ಕೆ ಜಿಗಿದರೇ, ಆಲ್‌ರೌಂಡರ್ ವಿಭಾಗದಲ್ಲಿ ಸ್ನೇಹಾ ರಾಣಾ ಹಾಗೂ ಪೂಜಾ ವಸ್ತ್ರಕರ್ ಇಬ್ಬರೂ 41ನೇ ಸ್ಥಾನ ಹಂಚಿಕೊಂಡಿದ್ದಾರೆ.