ಮುಂಬೈ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸ್ತಬ್ಧವಾಗಿದೆ, ಕ್ರೀಡಾಪಟುಗಳೆಲ್ಲಾ ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಜನರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ಸ್ಮೃತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್ ‘ಡಬಲ್ ಟ್ರಬಲ್ ವಿತ್ ಸ್ಮೃತಿ ಅಂತ್ ಜೆಮ್ಮಿ’ ಎಂಬ ಯೂಟ್ಯೂಬ್ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಪುರುಷರ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ಭಾಗಿಯಾಗಿದ್ದರು.
Advertisement
Advertisement
2013ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಸ್ಮೃತಿ ಮಂಧನಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎಸ್‍ಸಿಎ)ಯಲ್ಲಿನ ಪುನರ್ ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಭಾರತ ತಂಡದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಬೌಲಿಂಗ್‍ನಲ್ಲಿ ತೊಡೆ ಭಾಗಕ್ಕೆ ತಿಂದಿದ್ದ ಬಲವಾದ ಪೆಟ್ಟೊಂದನ್ನು ಸಂದರ್ಶನ ವೇಳೆಯಲ್ಲಿ ಸ್ಮರಿಸಿದ್ದಾರೆ. ಅಲ್ಲದೇ ಶಮಿ ನೀಡಿದ ಪೆಟ್ಟಿಗೆ ತಮ್ಮ ತೊಡೆ 10 ದಿನಗಳ ಕಾಲ ಊದಿತ್ತು ಎಂದು ಹೇಳಿಕೊಂಡಿದ್ದಾರೆ.
Advertisement
‘ಶಮಿ ಅವರು ಮೊದಲು ನಿಧಾನವಾಗಿಯೇ ಬೌಲ್ ಮಾಡುವುದಾಗಿ ಹೇಳಿದ್ದರು. ಎನ್‍ಸಿಎ ರಿಹ್ಯಾಬ್‍ನಲ್ಲಿ ಇದ್ದಾಗ ಅವರು ಗಂಟೆಗೆ 120 ಕಿ.ಮೀ ವೇಗದಲ್ಲಿ ಆಫ್ ಸ್ಟಂಪ್‍ನಿಂದ ಆಚೆಗೇ ಬೌಲಿಂಗ್ ಮಾಡುವುದಾಗಿ ಹೇಳಿದ್ದರು. ಆದರೆ ನನಗೆ ಮೊದಲ 2 ಎಸೆತಗಳನ್ನು ಮುಟ್ಟಲು ಕೂಡ ಸಾಧ್ಯವಾಗಲಿಲ್ಲ. ಅಷ್ಟು ವೇಗದ ಬೌಲಿಂಗ್‍ನಲ್ಲಿ ನಾನು ಬ್ಯಾಟಿಂಗ್ ನಡೆಸಿರಲಿಲ್ಲ. 3ನೇ ಎಸೆತ ನೇರ ಬಾಡಿ ಲೈನ್‍ನಲ್ಲಿ ಬಂದು ನನ್ನ ತೊಡೆಗೆ ಬಡಿದಿತ್ತು. ಮುಂದಿನ 10 ದಿನಗಳ ಕಾಲ ನನ್ನ ತೊಡೆ ಊದಿಕೊಂಡಿತ್ತು’ ಎಂದು ಸ್ಮೃತಿ ಹೇಳಿದ್ದಾರೆ.
Advertisement
ಸ್ಮೃತಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ಶಮಿ ಯಾವಾಗಲೂ ಬ್ಯಾಟ್ಸ್ ಮನ್‍ಗಳ ಎದುರು ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ಅವರ ಎದುರು ನೆಟ್ಸ್ ನಲ್ಲಿ ಅಭ್ಯಾಸ ನಡೆಸುವುದು ಕಷ್ಟಸಾಧ್ಯ. ಶಮಿ ಟೀಂ ಇಂಡಿಯಾ ಅಪಾಯಕಾರಿ ಬೌಲರ್ ಗಳಲ್ಲಿ ಅವರೂ ಒಬ್ಬರು ಎಂದಿದ್ದಾರೆ.
23 ವರ್ಷದ ಸ್ಮೃತಿ ಮಂಧನಾ 2013ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಇದುವರೆಗೂ 51 ಏಕದಿನ ಪಂದ್ಯಗಳನ್ನು ಆಡಿದ್ದು 2,025 ರನ್‍ಗಳನ್ನು ಗಳಿಸಿದ್ದಾರೆ. 43.08ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಂಧನಾ 4 ಶತಕ ಮತ್ತು 17 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲೂ 75 ಪಂದ್ಯಗಳಿಂದ 12 ಅರ್ಧಶತಕಗಳನ್ನು ಒಳಗೊಂಡ 1,716 ರನ್‍ಗಳನ್ನು ಗಳಿಸಿದ್ದಾರೆ.